ADVERTISEMENT

ನಿತೀಶ್‌ ಕುಮಾರ್ ಭಾಷಣದ ವೇಳೆ ಮೊಬೈಲ್‌ಫೋನ್‌ನಲ್ಲಿ ಮೋದಿ ಚಿತ್ರ ವೀಕ್ಷಿಸಿದ ಐಪಿಎಸ್‌ ಅಧಿಕಾರಿಗೆ ನೋಟಿಸ್

ಏಜೆನ್ಸೀಸ್
Published 3 ಜುಲೈ 2017, 13:29 IST
Last Updated 3 ಜುಲೈ 2017, 13:29 IST
ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲನಿಯಾ ಟ್ರಂಪ್ ಜತೆಗೆ ಮಾತುಕತೆ ನಡೆಸುತ್ತಿದ್ದ ಚಿತ್ರವನ್ನು ಐಪಿಎಸ್‌ ಅಧಿಕಾರಿಯು ಮೊಬೈಲ್‌ಫೋನ್‌ನಲ್ಲಿ ವೀಕ್ಷಿಸುತ್ತಿರುವುದು
ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲನಿಯಾ ಟ್ರಂಪ್ ಜತೆಗೆ ಮಾತುಕತೆ ನಡೆಸುತ್ತಿದ್ದ ಚಿತ್ರವನ್ನು ಐಪಿಎಸ್‌ ಅಧಿಕಾರಿಯು ಮೊಬೈಲ್‌ಫೋನ್‌ನಲ್ಲಿ ವೀಕ್ಷಿಸುತ್ತಿರುವುದು   

ಪಟ್ನಾ: ವಿಚಾರ ಸಂಕಿರಣವೊಂದರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾಷಣ ಮಾಡುತ್ತಿದ್ದ ವೇಳೆ ಮೊಬೈಲ್‌ ಫೋನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ವೀಕ್ಷಿಸಿದ ಮತ್ತು ಗೇಮ್‌ನಲ್ಲಿನಿರತರಾಗಿದ್ದ ಮೂವರು ಐಪಿಎಸ್‌ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್ ನೀಡಲಾಗಿದೆ.

ನಡೆದಿದ್ದೇನು?: ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಕಳ್ಳಸಾಗಣಿಕೆ ತಡೆ ದಿನದಂದು ವಿಚಾರ ಸಂಕಿರಣವೊಂದರಲ್ಲಿ ನಿತೀಶ್ ಕುಮಾರ್ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ, ಮೊದಲ ಸಾಲಿನಲ್ಲಿ ಕುಳಿತಿದ್ದ ಐಪಿಎಸ್ ಅಧಿಕಾರಿಯೊಬ್ಬರು ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲನಿಯಾ ಟ್ರಂಪ್ ಜತೆಗೆ ಮಾತುಕತೆ ನಡೆಸುತ್ತಿದ್ದ ಚಿತ್ರವನ್ನು ಮೊಬೈಲ್‌ಫೋನ್‌ನಲ್ಲಿ ವೀಕ್ಷಿಸಿದ್ದರು. ಇನ್ನೊಬ್ಬ ಐಪಿಎಸ್‌ ಅಧಿಕಾರಿ ಮೊಬೈಲ್‌ಫೊನ್‌ನಲ್ಲಿ ‘ಕ್ಯಾಂಡಿ ಕ್ರಷ್’ ಆಟವಾಡುತ್ತಿದ್ದರೆ ಮತ್ತೊಬ್ಬರು ಸಾಮಾಜಿಕ ಜಾಲತಾಣವನ್ನು ನೋಡುತ್ತಿದ್ದರು. ಈ ದೃಶ್ಯವನ್ನು ಸುದ್ದಿವಾಹಿನಿಯೊಂದರ ಸಿಬ್ಬಂದಿ ಸೆರೆಹಿಡಿದಿದ್ದರು.

ವಿಚಿತ್ರವೆಂದರೆ, ಮದ್ಯಪಾನ ಮತ್ತು ಮಾದಕ ದ್ರವ್ಯ ವ್ಯಸನ ಮತ್ತು ಕಳ್ಳಸಾಗಣಿಕೆ ತಡೆಯಲು ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹೇಳುತ್ತಿರುವಾಗಲೇ ಈ ಅಧಿಕಾರಿಗಳು ಮೊಬೈಲ್‌ಫೋನ್ ನೋಡುತ್ತಿದ್ದರು ಎನ್ನಲಾಗಿದೆ. ರಾಜ್ಯ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧಗಳ ದಳ ವಿಚಾರ ಸಂಕಿರಣ ಆಯೋಜಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.