ADVERTISEMENT

ನಿರುದ್ಯೋಗಿ ಯುವಕ ಆತ್ಮಹತ್ಯೆ

ಪಿಟಿಐ
Published 17 ಮೇ 2018, 18:30 IST
Last Updated 17 ಮೇ 2018, 18:30 IST

ಹೈದರಾಬಾದ್‌ : ಕೆಲಸ ಸಿಗದ ಕಾರಣ 21 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ನಿರ್ಧಾರ ಕೈಗೊಂಡ ಸಂದೇಶವಿರುವ ವಿಡಿಯೊ ದೃಶ್ಯಾವಳಿಯನ್ನು ಆತ ದಾಖಲಿಸಿದ್ದು ಪೊಲೀಸರು ಇದನ್ನು ವಶಪಡಿಸಿಕೊಂಡಿದ್ದಾರೆ.

ಸರೋರ್‌ನಗರದಲ್ಲಿ ಸ್ನೇಹಿತರ ಜೊತೆಗೆ ಬಾಡಿಗೆ ಮನೆಯಲ್ಲಿದ್ದ ಈತ ಅಲ್ಲಿಯೇ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾನೆ. ಕೆಲಸ ಸಿಗಲಿಲ್ಲವೆಂದು ಈತ ಖಿನ್ನತೆಗೊಳಗಾಗಿದ್ದ. ಸಾಯುವ ಹಿಂದಿನ ದಿನವೂ ಈತ ಕಂಪನಿಯೊಂದರ ಸಂದರ್ಶನಕ್ಕೆ ಹೋಗಿದ್ದ, ಆದರೆ ಕೆಲಸ ಸಿಕ್ಕಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT