ADVERTISEMENT

ನಿರ್ಬಂಧಿತ ಪ್ರದೇಶಕ್ಕೆ ಪ್ರವಾಸ: ಅನುಮತಿಗೆ ವಿನಾಯಿತಿ

ಪಿಟಿಐ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST

ನವದೆಹಲಿ: ಪಾಕಿಸ್ತಾನ, ಚೀನಾ ಹೊರತುಪಡಿಸಿ ಇತರೆ ದೇಶಗಳ ಪ್ರವಾಸಿಗರಿಗೆ ದೇಶದ ಕೆಲವು ಪ್ರದೇಶಗಳಿಗೆ ಭೇಟಿ ನೀಡಲು ಪಡೆಯಬೇಕಿದ್ದ ವಿಶೇಷ ಅನುಮತಿಗೆ ವಿನಾಯಿತಿ ನೀಡಲು ಕೇಂದ್ರ ಗೃಹ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ.

ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶದ ಕೆಲ ಭಾಗ, ಉತ್ತರಾಖಂಡ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಕೆಲವು ನಿರ್ದಿಷ್ಟ ಸ್ಥಳಗಳಿಗೆ ಭೇಟಿ ನೀಡಲು ವಿದೇಶಿ ಪ್ರವಾಸಿಗರು ವಿಶೇಷ ಅನುಮತಿ ಪಡೆಯಬೇಕಿತ್ತು. ಆರು ದಶಕಗಳಷ್ಟು ಹಳೆಯ ‘ನಿರ್ಬಂಧಿತ ಪ್ರದೇಶ ಅನುಮತಿ’ ಮತ್ತು ‘ಸಂರಕ್ಷಿತ ಪ್ರದೇಶ ಅನುಮತಿ‘ ನೀತಿಯನ್ನು ಸಡಿಲುಗೊಳಿಸಲು ಗೃಹ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ.

‘ಈ ಕುರಿತು ಆಯಾ ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಆದಾಯ ಹೆಚ್ಚಿಸಿಕೊಳ್ಳುವುದು ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಉದ್ಯೋಗಸೃಷ್ಟಿಗೆ ಈ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.