ADVERTISEMENT

ಪಂಜಾಬ್ ಸಚಿವನಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 5 ಮೇ 2012, 19:30 IST
Last Updated 5 ಮೇ 2012, 19:30 IST
ಪಂಜಾಬ್ ಸಚಿವನಿಗೆ ಜೈಲು
ಪಂಜಾಬ್ ಸಚಿವನಿಗೆ ಜೈಲು   

ಚಂಡೀಗಡ (ಐಎಎನ್‌ಎಸ್): ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಂಜಾಬ್ ಕೃಷಿ ಸಚಿವ ತೋಟಾ ಸಿಂಗ್ ಅವರಿಗೆ ಮೊಹಾಲಿ ಪಟ್ಟಣದ ಕೋರ್ಟ್ ಶನಿವಾರ ಒಂದು ವರ್ಷದ ಜೈಲು ಶಿಕ್ಷೆ ಹಾಗೂ ಮೂವತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ.

1997-2002 ರ ಅವಧಿಯ ಪ್ರಕಾಶ್ ಸಿಂಗ್ ಬಾದಲ್ ಸಂಪುಟದಲ್ಲಿ ಶಿಕ್ಷಣ ಸಚಿವರಾಗ್ದ್ದಿದ ತೋಟಾ ಸಿಂಗ್, ಪಂಜಾಬ್ ಶಿಕ್ಷಣ ಮಂಡಳಿಗೆ ಸೇರಿದ ಕಾರು ದುರ್ಬಳಕೆ ಮಾಡಿಕೊಂಡ ಆರೋಪದಡಿ ಜಾಗೃತ ದಳದವರು ಪ್ರಕರಣ ದಾಖಲಿಸಿದ್ದರು. ಶಿಕ್ಷಣ ಇಲಾಖೆಯ ಗುಮಾಸ್ತರ ನೇಮಕಾತಿ ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರ ನಡೆಸಿದ ಆರೋಪದಡಿ ಅವರನ್ನು 2002ರಲ್ಲಿ ಬಂಧಿಸಲಾಗಿತ್ತು.

ಶಿಕ್ಷೆಯ ತೀರ್ಪು ಹೊರಬೀಳುತ್ತಿದ್ದಂತೆಯೇ ಸಚಿವ ಜಾಗೃತ ದಳದ ಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಐದು ವಾರಗಳ ಅವಧಿಯಲ್ಲಿ ಪಂಜಾಬ್ ಸರ್ಕಾರಕ್ಕೆ ಮುಜುಗುರ ತಂದ 2ನೇ ಪ್ರಕರಣ ಇದಾಗಿದ್ದು, ಮಗಳ ಶಂಕಾಸ್ಪದ ಸಾವಿನ ಪ್ರಕರಣದಲ್ಲಿ ಸಂಪುಟ ದರ್ಜೆ ಸಚಿವೆ ಜಾಗಿರ್ ಕೌರ್ ಅವರಿಗೆ  ಮಾರ್ಚ್ 30 ರಂದು 5 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.