ADVERTISEMENT

ಪಕ್ಷಗಳ ಮಾನ್ಯತೆ: ಆಯೋಗಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಯಾವುದೇ ರಾಜಕೀಯ ಪಕ್ಷ ಮಾನ್ಯತೆ ಪಡೆಯಬೇಕಾದರೆ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಶೇ 6ರಷ್ಟಾದರೂ ಮತಗಳನ್ನು ಪಡೆಯುವುದರ ಜೊತೆಗೆ ಕನಿಷ್ಠ ಎರಡು ಸ್ಥಾನಗಳಲ್ಲಾದರೂ ಜಯ ಗಳಿಸಿರಬೇಕೆಂಬ ಚುನಾವಣಾ ಆಯೋಗದ ನಿಯಮಾವಳಿಯನ್ನು  ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಆಯೋಗದ ಈ ನಿರ್ಧಾರ ಅತಾರ್ಕಿಕ ಅಲ್ಲ ಎಂದಿರುವ ನ್ಯಾಯಪೀಠ, ಈ ಸಂಬಂಧ ಸಲ್ಲಿಸಲಾಗಿದ್ದ ಹಲವು ರಾಜ್ಯಗಳ ಮಾನ್ಯತೆ ರಹಿತ ಪಕ್ಷಗಳ ಅರ್ಜಿಗಳನ್ನು ತಳ್ಳಿಹಾಕಿದೆ.

`ಚುನಾವಣಾ ಆಯೋಗದ ನಿಯಮಾವಳಿಗಳು ಖಂಡಿತವಾಗಿಯೂ ಅತಾರ್ಕಿಕವಲ್ಲ. ಯಾವುದೇ ಪಕ್ಷ ರಾಜ್ಯದ ರಾಜಕೀಯ ವಲಯದಲ್ಲಿ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿದಲ್ಲಿ ಮಾತ್ರ ಪ್ರಬಲ ರಾಜಕೀಯ ಪಕ್ಷವಾಗಿ ಹೊರಹೊಮ್ಮಲು ಸಾಧ್ಯ. ಹಾಗಿದ್ದರೆ ಮಾತ್ರ ಮಾನ್ಯತೆ ಪಡೆಯಲು ರಾಜಕೀಯ ಪಕ್ಷಗಳು ಅರ್ಹತೆ ಪಡೆಯುತ್ತವೆ~ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.