ADVERTISEMENT

ಪಕ್ಷದ ಗುರುತಿಗಾಗಿ ಆಯೋಗಕ್ಕೆ ಶರದ್ ಯಾದವ್‌ ಅರ್ಜಿ

ಪಿಟಿಐ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST

ನವದೆಹಲಿ: ಪಕ್ಷದ ಚುನಾವಣಾ ಗುರುತು ಪಡೆಯುವ ಸಲುವಾಗಿ ಹೊಸದಾಗಿ ಅರ್ಜಿ ಸಲ್ಲಿಸುವುದಾಗಿ ಜೆಡಿಯುನ ಭಿನ್ನಮತೀಯ ನಾಯಕ ಶರದ್ ಯಾದವ್‌ ಬಣ ಭಾನುವಾರ ಹೇಳಿದೆ. ಪಕ್ಷದ ಗುರುತನ್ನು ಈ ಬಣಕ್ಕೆ ಏಕೆ ನೀಡಬೇಕು ಎಂಬುದಕ್ಕೆ ಸಾಕ್ಷ್ಯಾಧಾರ ಒದಗಿಸಬೇಕು ಎಂದು ಚುನಾವಣಾ ಆಯೋಗ ಕೇಳಿತ್ತು.

ಹೊಸದಾಗಿ ಅರ್ಜಿ ಸಲ್ಲಿಸಿ ಸಾಕ್ಷ್ಯಾಧಾರ ಒದಗಿಸಲು ತಿಳಿಸಲು ಮುಕ್ತವಾಗಿರುವುದಾಗಿ ಆಯೋಗ ತಿಳಿಸಿರುವುದಾಗಿ ಶರದ್‌ ಯಾದವ್‌ ಹೇಳಿದ್ದಾರೆ. ಈ ಬಗ್ಗೆ ಶರದ್‌ ಬಣಕ್ಕೆ ಆಯೋಗ ಸೆ. 27ರಂದು ಪತ್ರ ಬರೆದಿತ್ತು.

ಸೆ. 17ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಹಮ್ಮಿಕೊಳ್ಳುವುದಾಗಿ ಯಾದವ್ ಬಣ ಈ ಮೊದಲು ಹೇಳಿತ್ತು. ಆನಂತರ ಅ. 8ರಂದು ರಾಷ್ಟ್ರೀಯ ಮಂಡಳಿ ಸಭೆಯನ್ನು ನಡೆಸುವುದಾಗಿ ತಿಳಿಸಿದೆ. ಆಯೋಗಕ್ಕೆ ಸಾಕ್ಷ್ಯಾಧಾರ ಒದಗಿಸಲು ನಾಲ್ಕು ವಾರಗಳ ಕಾಲಾವಕಾಶವನ್ನು ಶರದ್‌ ಬಣ ಕೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.