
ಪ್ರಜಾವಾಣಿ ವಾರ್ತೆಪಾಟ್ನ (ಪಿಟಿಐ): ಯುಪಿಎ ಮತ್ತು ಎನ್‌ಡಿಎ ಮೈತ್ರಿಕೂಟಗಳಿಗೆ ಪರ್ಯಾಯವಾಗಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಸ ಮೈತ್ರಿಕೂಟ ರಚಿಸುವ ಮಾತುಕತೆ ಆರಂಭವಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮಣಿಸಲು ಪರ್ಯಾಯ ಮೈತ್ರಿ ಕೂಟ ರಚನೆಗಾಗಿ ಮಾತುಕತೆ ಆರಂಭವಾಗಿದೆ. ಇದಕ್ಕೆ ಸಮಾನ ಚಿಂತನೆ ಹೊಂದಿರುವ ಪಕ್ಷಗಳು ಕೈಜೋಡಿಸಬೇಕೆಂದು ನಿತೀಶ್ ಕುಮಾರ್ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತೃತಿಯರಂಗ ಮತ್ತು ನಾಲ್ಕನೆ ರಂಗದ ಬಗ್ಗೆ ಸುಳಿವು ನೀಡದೆ, ಸಮಾನ ಮನಸ್ಕ ಪಕ್ಷಗಳು ಒಗ್ಗೂಡಲು ಇದು ಸಕಾಲ ಎಂದರು.
ಪರ್ಯಾಯ ಕೂಟದಲ್ಲಿ ಯಾವ ಯಾವ ಪಕ್ಷಗಳು ಸೇರಲಿವೆ ಎಂಬುದರ ಬಗ್ಗೆ ನಿತೀಶ್ ಕುಮಾರ್ ಮಾಹಿತಿ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.