ADVERTISEMENT

ಪಾಕ್‌ಗೆ ಭಾರತದ ಆಹ್ವಾನ: ಪಿಳ್ಳೈ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:35 IST
Last Updated 13 ಫೆಬ್ರುವರಿ 2011, 19:35 IST

 ನವದೆಹಲಿ (ಪಿಟಿಐ): ಮಹತ್ವಪೂರ್ಣ ದ್ವಿಪಕ್ಷೀಯ ಮಾತುಕತೆ ಪುನರಾ ರಂಭಕ್ಕೆ ಭಾರತ ಮತ್ತು ಪಾಕಿಸ್ತಾನ ನಿರ್ಧರಿಸಿರುವ ಬೆನ್ನಲ್ಲೇ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ, ಮುಂಬೈ ಮೇಲಿನ ಉಗ್ರರ ದಾಳಿಯ ವಿಚಾ ರಣಾ ಪ್ರಗತಿ ಸೇರಿ ಭಯೋತ್ಪಾದನೆ ನಿಗ್ರಹದ ಕುರಿತು ಚರ್ಚೆಗಾಗಿ ಮುಂದಿನ ತಿಂಗಳು ಇಲ್ಲಿಗೆ ಆಗಮಿಸುವಂತೆ ತಮ್ಮ ಪಾಕ್ ಸಹವರ್ತಿಗೆ ಆಹ್ವಾನ ನೀಡಿದ್ದಾರೆ.

ಮಾರ್ಚ್ ಎರಡನೇ ವಾರದಲ್ಲಿ ಸಭೆಯೊಂದನ್ನು ನಡೆಸುವ ಬಗ್ಗೆ ಎರಡು ದಿನಾಂಕ ನಿಗದಿಪಡಿಸಿ ಪಾಕ್ ಆಂತರಿಕ ಭದ್ರತಾ (ಗೃಹ) ಕಾರ್ಯದರ್ಶಿ ಚೌಧರಿ ಖಮರ್ ಜಮಾನ್ ಅವರಿಗೆ ಈ ವಾರವೇ ತಾವು ಪ್ರಸ್ತಾವ ಕಳುಹಿಸುವುದಾಗಿ ಅವರು ಭಾನುವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ರಾವಲ್ಪಿಂಡಿ ನ್ಯಾಯಾಲಯದಲ್ಲಿ 26/11ರ ದಾಳಿಗೆ ಸಂಬಂಧಿಸಿದ ವಿಚಾರಣೆಯ ಪ್ರಗತಿ ಸೇರಿ ಭಯೋತ್ಪಾದನೆ ನಿಗ್ರಹದ ಮೇಲೆ ಪಾಕ್ ಕ್ರಮಗಳ ಬಗ್ಗೆ ಚರ್ಚಿಸಲು ನಡೆಯುತ್ತಿರುವ ಮೊದಲ ದ್ವಿಪಕ್ಷೀಯ ಕಾರ್ಯದರ್ಶಿಗಳ ಮಟ್ಟದ ಸಭೆ ಇದಾಗಲಿದೆ ಎಂದು ಹೇಳಿದರು.


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.