ನವದೆಹಲಿ (ಪಿಟಿಐ): ತನ್ನ ದೇಶದ ಪರವಾಗಿ ಅಕ್ರಮ ಗೂಢಚಾರಿಕೆಯಲ್ಲಿ ತೊಡಗಿದ್ದ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನದ ಪ್ರಜೆಗೆ ದೆಹಲಿ ಕೋರ್ಟ್ ಮಂಗಳವಾರ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದ ಇನ್ನಿಬ್ಬರನ್ನು ಕೋರ್ಟ್ ದೋಷಮುಕ್ತಗೊಳಿಸಿದೆ.
`ಆರೋಪಿ ಇರ್ಫಾನ್ ಕೌಸರ್ (33) ಪಾಕಿಸ್ತಾನದ ಪ್ರಜೆ ಎನ್ನುವುದು ಸಾಬೀತಾಗಿದೆ. ಅಲ್ಲದೆ ಈತನ ಬಳಿ ಕೆಲವೊಂದು ಸೂಕ್ಷ್ಮ ಸೇನಾ ದಾಖಲೆಗಳು ಸಿಕ್ಕಿವೆ~ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಜನೀಶ್ ಕುಮಾರ್ ಗುಪ್ತ ತಿಳಿಸಿದ್ದಾರೆ.
2005ರ ಸೆಪ್ಟೆಂಬರ್ 7ರಂದು ಇರ್ಫಾನ್‌ನನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗವು ದಕ್ಷಿಣ ದೆಹಲಿಯ ಭಿಕಜಿ ಕಾಮಾ ಪ್ರದೇಶದಲ್ಲಿ ಬಂಧಿಸಿತ್ತು. ಆ ಸಂದರ್ಭದಲ್ಲಿ ಈತ ಕೆಲವು ಸೂಕ್ಷ್ಮ ಸೇನಾ ಮಾಹಿತಿಗಳನ್ನು ಇ- ಮೇಲ್ ಮೂಲಕ ಕಳುಹಿಸುತ್ತಿದ್ದ.
`ಪ್ರಕರಣದ ತನಿಖೆಯಲ್ಲಿ ಈತ ಪಾಕಿಸ್ತಾನದ ಗುಜ್ರವಾಲಾ ಜಿಲ್ಲೆಯ ಉಗ್ಗುಚಕ್ ಗ್ರಾಮದ ನಿವಾಸಿ ಎನ್ನುವುದು ಗೊತ್ತಾಯಿತು. ಇರ್ಫಾನ್, ನೇಪಾಳ ಗಡಿ ಮೂಲಕ ದೇಶದ ಒಳಗೆ ನುಸುಳಿದ್ದಾನೆ. ಅಶೋಕ್ ಕುಮಾರ್ ಎನ್ನುವ ಹೆಸರಿನಲ್ಲಿ ಮಹಮ್ಮದ್‌ಪುರ ಗ್ರಾಮದಲ್ಲಿ ವಾಸಿಸುತ್ತಿದ್ದ~ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.