ADVERTISEMENT

ಪಿಐಎಲ್‌ಗೆ ಬಾಂಬೆ ಹೈಕೋರ್ಟ್‌ ತರಾಟೆ

ಪಿಟಿಐ
Published 6 ಅಕ್ಟೋಬರ್ 2017, 20:38 IST
Last Updated 6 ಅಕ್ಟೋಬರ್ 2017, 20:38 IST
ಪಿಐಎಲ್‌ಗೆ ಬಾಂಬೆ ಹೈಕೋರ್ಟ್‌ ತರಾಟೆ
ಪಿಐಎಲ್‌ಗೆ ಬಾಂಬೆ ಹೈಕೋರ್ಟ್‌ ತರಾಟೆ   

ಮುಂಬೈ: ಇಲ್ಲಿನ ಎಲ್ಫಿನ್‌ಸ್ಟನ್‌ ರಸ್ತೆ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ ನಂತರವೇ ’ಸ್ವಯಂಘೋಷಿತ ಸಾಮಾಜಿಕ ಕಾರ್ಯಕರ್ತರು' ಪ್ರಯಾಣಿಕರ ಸುರಕ್ಷೆಯ ವಿಚಾರವಾಗಿ ಏಕೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕು, ಸಾಕಷ್ಟು ಜನ ಮೃತಪಟ್ಟ ನಂತರವಷ್ಟೇ ಗಂಭೀರ ಮತ್ತು ಸೂಕ್ಷ್ಮ ವಿಷಯದ ಬಗ್ಗೆ ಏಕೆ ಎಚ್ಚರಗೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಕಾಲ್ತುಳಿತ ಸಂಭವಿಸಿದ ಕೂಡಲೇ ಹೈಕೋರ್ಟ್‌ನಲ್ಲಿ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ‘1867ರಿಂದಲೂ ಈ ನಿಲ್ದಾಣದಲ್ಲಿ ಮೇಲ್ಸೇತುವೆ ಇದೆ. ಇಲ್ಲಿಯವರೆಗೆ ಯಾರೂ ಸಮಸ್ಯೆಯ ಬಗ್ಗೆ ಗಮನವೇ ಹರಿಸಿಲ್ಲ. ಈಗ ಕೇವಲ ಪ್ರಚಾರಕ್ಕಾಗಿ ಪಿಐಎಲ್‌
ಗಳನ್ನು ಸಲ್ಲಿಸಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಮತ್ತು ನ್ಯಾಯಮೂರ್ತಿ ಎನ್‌.ಎಂ.ಜಾಮ್‌ದಾರ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.

ವಿಕ್ರಾಂತ್‌ ತಾವ್ಡೆ ಎಂಬುವವರು ಸಲ್ಲಿಸಿದ್ದ ಎರಡು ಪಿಐಎಲ್‌ ಮತ್ತು ದಕ್ಷಿಣ ಮುಂಬೈ ವಿಭಾಗದ ಕಾಂಗ್ರೆಸ್‌ ಅಧ್ಯಕ್ಷೆ ಸ್ಮಿತಾ ಮಯಾಂಕ್‌ ಧ್ರುವ ಎಂಬುವವರ ಒಂದು ಪಿಐಎಲ್‌ ಅನ್ನು ಹೈಕೋರ್ಟ್ ವಿಚಾರಣೆಗೆ ಎತ್ತಿಕೊಂಡಿತ್ತು. ಹಿಂದೆ ಈ ಸಮಸ್ಯೆ ಪರಿಹರಿಸಲು ತಾವು ಮಾಡಿದ ಪ್ರಯತ್ನಗಳ ಬಗ್ಗೆ ಅಫಿಡವಿಡ್‌ ಸಲ್ಲಿಸುವಂತೆ ಸ್ಮಿತಾ ಅವರಿಗೆ ಪೀಠ ಸೂಚಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.