ADVERTISEMENT

ಪುರಿ ಮಠದಲ್ಲಿ 14 ಟನ್ ಬೆಳ್ಳಿ ಇಟ್ಟಿಗೆ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 18:25 IST
Last Updated 26 ಫೆಬ್ರುವರಿ 2011, 18:25 IST

ಪುರಿ (ಪಿಟಿಐ): ಇಲ್ಲಿಯ ಶ್ರೀ ಜಗನ್ನಾಥ ದೇವಸ್ಥಾನದ ಎದುರಿನಲ್ಲಿ ಇರುವ ಎಮಾರ್ ಮಠದಲ್ಲಿ 349 ಬೆಳ್ಳಿಯ ಇಟ್ಟಿಗೆಗಳು ಶನಿವಾರ ಪತ್ತೆಯಾಗಿವೆ.

ಮೂರು ಮರದ ಪೆಟ್ಟಿಗೆಗಳಲ್ಲಿ ತುಂಬಿಸಿಟ್ಟಿದ್ದ ಈ ಇಟ್ಟಿಗೆಗಳ ಒಟ್ಟು ತೂಕ 14 ಟನ್! ಪ್ರತಿ ಇಟ್ಟಿಗೆಯೂ 38ರಿಂದ 40 ಕೆ.ಜಿ. ಭಾರವಾಗಿದೆ. ಈ  ಇಟ್ಟಿಗೆಗಳಲ್ಲಿ ಕೆಲವನ್ನು ಕದ್ದು ಮಾರಲು ಯತ್ನಿಸಿದ ಇಬ್ಬರನ್ನು ಬಂಧಿಸಿದ್ದರಿಂದ ಪೆಟ್ಟಿಗೆಗಳಲ್ಲಿ ಅವಿತಿದ್ದ ರಹಸ್ಯ ಬಹಿರಂಗಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.