ADVERTISEMENT

ಪೆಟ್ರೋಲ್ ಬೆಲೆ: 85 ಪೈಸೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದ ಹಿನ್ನೆಲೆಯಲ್ಲಿ ದೇಶೀಯ ತೈಲ ಕಂಪೆನಿಗಳು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 85 ಪೈಸೆಯಷ್ಟು ಕಡಿತಗೊಳಿಸಿದ್ದು, ಪರಿಷ್ಕೃತ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.

ಇದೇ ಮೊದಲ ಬಾರಿಗೆ ಎರಡು ವಾರಗಳ ಅವಧಿಯಲ್ಲಿ ಎರಡು ಬಾರಿ ಪೆಟ್ರೋಲ್ ಬೆಲೆಯನ್ನು ಇಳಿಸಲಾಗಿದೆ. ಕಡಿತಗೊಂಡಿರುವ ಪೆಟ್ರೋಲ್ ದರ, ಸ್ಥಳೀಯ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆಯಿಂದ ಹೊರತಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ದರ  ಇಳಿಕೆ ನಂತರ ದೆಹಲಿಯಲ್ಲಿ  ಪೆಟ್ರೋಲ್ ದರ ಲೀಟರ್‌ಗೆ ರೂ.67.29 (1.02 ರೂ. ಕಡಿತ), ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಕ್ರಮವಾಗಿ

ರೂ. 74.14 (1.07 ರೂ ಕಡಿತ) ಹಾಗೂ ಚೆನ್ನೈನಲ್ಲಿ ರೂ.70.34 (1.30)  ಇಳಿಕೆಯಾಗಲಿದೆ.

ಎಲ್‌ಪಿಜಿ ರೂ. 3 ಇಳಿಕೆ
ನವದೆಹಲಿ (ಪಿಟಿಐ
): ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳಲ್ಲಿ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಸಬ್ಸಿಡಿರಹಿತ ಗೃಹಬಳಕೆ ಸಿಲಿಂಡರ್ (ಎಲ್‌ಪಿಜಿ) ಬೆಲೆಯನ್ನು ಸೋಮವಾರದಿಂದ ಜಾರಿಗೆ ಬರುವಂತೆ ಪ್ರತಿಯೊಂದಕ್ಕೆ ರೂ. 3ರಷ್ಟು ಕಡಿಮೆ ಮಾಡಲಾಗಿದೆ.

ಸದ್ಯದ ವ್ಯವಸ್ಥೆಯಂತೆ 14.2 ಕೆಜಿ ಭಾರದ ಸಿಲಿಂಡರ್‌ಗಳನ್ನು ವರ್ಷಕ್ಕೆ 9 ರಂತೆ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ಈ ಮಿತಿ ಮುಗಿದ ಮೇಲೆ ಸಿಲಿಂಡರ್ ಬೇಕು ಎಂದಾದಲ್ಲಿ ಗ್ರಾಹಕರು ಪ್ರತಿ ಸಿಲಿಂಡರ್‌ಗೆ ರೂ. 901.5 ಪಾವತಿಸಿ ಪಡೆಯಬಹುದಾಗಿದೆ ಎಂದು ಭಾರತೀಯ ತೈಲ ನಿಗಮ (ಐಒಸಿ) ತಿಳಿಸಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸರ್ಕಾರ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 6 ಸಬ್ಸಿಡಿ ದರದ ಸಿಲಿಂಡರ್‌ಗಳನ್ನು ಮಾತ್ರ ಪೂರೈಸುವುದಾಗಿ ತಿಳಿಸಿತ್ತು. ಈ ಕ್ರಮಕ್ಕೆ ವ್ಯಾಪಕ ವಿರೋಧವ್ಯಕ್ತವಾದ ಹಿನ್ನೆಲೆಯಲ್ಲಿ 6 ಸಿಲಿಂಡರ್‌ಗಳ ಮಿತಿಯನ್ನು 9ಕ್ಕೆ ಹೆಚ್ಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.