ADVERTISEMENT

ಪ್ಯಾನ್‌– ಆಧಾರ್‌ ಜೋಡಣೆ ಕಾಲಾವಕಾಶ ವಿಸ್ತರಣೆ ಸಾಧ್ಯತೆ

ಪಿಟಿಐ
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಪ್ಯಾನ್‌– ಆಧಾರ್‌ ಜೋಡಣೆ ಕಾಲಾವಕಾಶ ವಿಸ್ತರಣೆ ಸಾಧ್ಯತೆ
ಪ್ಯಾನ್‌– ಆಧಾರ್‌ ಜೋಡಣೆ ಕಾಲಾವಕಾಶ ವಿಸ್ತರಣೆ ಸಾಧ್ಯತೆ   

ನವದೆಹಲಿ: ಪ್ಯಾನ್‌ನೊಂದಿಗೆ ಆಧಾರ್‌ ಸಂಖ್ಯೆ ಜೋಡಿಸುವುದನ್ನು ಕಡ್ಡಾಯಗೊಳಿಸುವ ಕೇಂದ್ರದ ನಿಲುವಿನ ಪರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೆ, ಇವುಗಳ ಜೋಡಣೆಗಾಗಿ ಮೂರರಿಂದ ಆರು ತಿಂಗಳ ಕಾಲಾವಕಾಶ ನೀಡುವ ಸಾಧ್ಯತೆ ಇದೆ.

ನಿಗದಿತ ಅವಧಿಯಲ್ಲಿ ಜೋಡಣೆ ಮಾಡದ ಎಲ್ಲ ಪ್ಯಾನ್‌ ಕಾರ್ಡ್‌ಗಳು ರದ್ದುಗೊಳ್ಳಲಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಂತಹ ಕ್ರಮಕ್ಕೆ ಮುಂದಾದರೆ ಚಾಲ್ತಿಯಲ್ಲಿರುವ ಎಲ್ಲ ನಕಲಿ ಪ್ಯಾನ್‌ಗಳು ರದ್ದಾಗಿ ಬೇನಾಮಿ ವಹಿವಾಟು ನಡೆಸುವುದು ಕಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಸದ್ಯ, ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆ ಜೋಡಣೆಗೆ ಡಿಸೆಂಬರ್‌ 31ರ ಗಡುವನ್ನು ಆದಾಯ ತೆರಿಗೆ ಇಲಾಖೆ ನಿಗದಿಪಡಿಸಿದೆ. ಇದನ್ನು 2018ರ ಮಾರ್ಚ್‌ 31ರವರೆಗೆ ವಿಸ್ತರಿಸಲು ಸಿದ್ಧವಿರುವುದಾಗಿ ಅದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.