ADVERTISEMENT

ಪ್ರಜಾಪ್ರಭುತ್ವ ದೇಣಿಗೆ: ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಸಾರ್ವಜನಿಕರು ಹಾಗೂ ಕಾರ್ಪೊರೇಟ್ ಅಧಿಕಾರಿಗಳು ತಮ್ಮ ಆದಾಯ ತೆರಿಗೆಯಲ್ಲಿ ಶೇ 0.2ರಷ್ಟನ್ನು ತಮ್ಮಿಷ್ಟದ ರಾಜಕೀಯ ಪಕ್ಷಗಳಿಗೆ `ಪ್ರಜಾಪ್ರಭುತ್ವ ದೇಣಿಗೆ~ ನೀಡುವ ವಿನೂತನ ಪ್ರಸ್ತಾವವನ್ನು ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟ (ಸಿಐಐ) ಮುಂದಿಟ್ಟಿದೆ.

ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಸಿಐಐ ಕಾರ್ಯಪಡೆಯು ಮಂಗಳವಾರ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಶಿ ಅವರಿಗೆ ಸಲ್ಲಿಸಿದ ವರದಿಯಲ್ಲಿ ಈ ಪ್ರಸ್ತಾವ ಇಟ್ಟಿದೆ.

`ತೆರಿಗೆದಾರರು ನೇರವಾಗಿ ಈ ದೇಣಿಗೆಯನ್ನು ಚೆಕ್ ಮೂಲಕ ತಮ್ಮಿಷ್ಟದ ರಾಜಕೀಯ ಪಕ್ಷಗಳ (ಚುನಾ ವಣಾ ಆಯೋಗದ ಮಾನ್ಯತೆ ಪಡೆದ ಪಕ್ಷ) ಖಾತೆಗೆ ಜಮಾ ಮಾಡಬಹುದು~ ಎಂದು ಶಿಫಾರಸು ಮಾಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.