ನವದೆಹಲಿ (ಐಎಎನ್ಎಸ್): ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ಅವರ ಸಚಿವ ಸಂಪುಟದ ಸಚಿವರು ಶನಿವಾರ ಜಾಲತಾಣದ ಮೂಲಕ ತಮ್ಮ ಆಸ್ತಿಯ ವಿವರಗಳನ್ನು ಘೋಷಣೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ http://pmindia.nic.in/rti.htm. ಜಾಲತಾಣದ ಮೂಲಕ ಪ್ರಧಾನಮಂತ್ರಿ ಸೇರಿದಂತೆ 32 ಕ್ಯಾಬಿನೆಟ್ ದರ್ಜೆಯ ಸಚಿವರು, ಸ್ವತಂತ್ರ ದರ್ಜೆಯ ಏಳು ರಾಜ್ಯ ಸಚಿವರು ಮತ್ತು 37 ರಾಜ್ಯ ಸಚಿವರು ಈ ಜಾಲತಾಣದಲ್ಲಿ ತಮ್ಮ ಆಸ್ತಿಯ ವಿವರ ಮತ್ತು ಹೊಣೆಗಾರಿಕೆಗಳನ್ನು ಘೋಷಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.