ADVERTISEMENT

ಪ್ರಧಾನಿ ಕಠಿಣ ಕ್ರಮದ ಭರವಸೆ

ಮುಜಾಫರ್ ನಗರ ಹಿಂಸಾಚಾರ: ಸಿಂಗ್, ಸೋನಿಯಾ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 12:23 IST
Last Updated 16 ಸೆಪ್ಟೆಂಬರ್ 2013, 12:23 IST
ಪ್ರಧಾನಿ ಕಠಿಣ ಕ್ರಮದ ಭರವಸೆ
ಪ್ರಧಾನಿ ಕಠಿಣ ಕ್ರಮದ ಭರವಸೆ   

ಮುಜಾಫರ್ ನಗರ (ಪಿಟಿಐ): ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿ ಕೋಮು ಗಲಭೆಯಿಂದ ತತ್ತರಿಸಿದ್ದ ಪ್ರದೇಶಗಳಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಸೋಮವಾರ ಭೇಟಿ ನೀಡಿ ಪ್ರಧಾನಿ ಮನಮೋಹನ್ ಸಿಂಗ್, ನೊಂದವರಿಗೆ ಸಾಂತ್ವನ ಹೇಳಿದರು.

ಜೊತೆಗೆ ಘಟನೆ ಹಿಂದಿನ ರೂವಾರಿಗಳಿಗೆ  `ಕಠಿಣ ಶಿಕ್ಷೆಯ' ಭರವಸೆ ನೀಡಿದ ಸಿಂಗ್ ಹಾಗೂ ಸೋನಿಯಾ, ಶಾಂತಿ ಹಾಗೂ ಸಾಮರಸ್ಯ ಕಾಪಾಡುವಂತೆ ಸಮಾಜದ ಎಲ್ಲಾ ವರ್ಗದಲ್ಲಿ ಮನವಿ ಮಾಡಿದರು.

ಸಾಮಾನ್ಯ ಸ್ಥಿತಿ ಮರುಕಳಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರಕ್ಕೆ ಕೇಂದ್ರ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಅಭಯ ನೀಡಿದ ಪ್ರಧಾನಿ, ಸಂತ್ರಸ್ತ ಜನರನ್ನು ಭದ್ರತಾ ಭಾವದೊಂದಿಗೆ ಅವರ ಮನೆಗಳಿಗೆ ಕಳುಹಿಸಲು `ಆದ್ಯತೆ ಹಾಗೂ  ಪ್ರಯತ್ನ' ಮಾಡಲಾಗುವುದು ಎಂದಿದ್ದಾರೆ.

ADVERTISEMENT

ಹಿಂಸಾಚಾರದಲ್ಲಿ ನಲುಗಿರುವ ಮುಸ್ಲಿಂರ ಆಶ್ರಯ ಪಡೆದಿರುವ ಇಲ್ಲಿಂದ 30 ಕಿ.ಮೀ. ದೂರದಲ್ಲಿರುವ ಬಸ್ಸಿ ಕಲನ್ ಗ್ರಾಮಕ್ಕೆ ಪ್ರಧಾನಿ, ಸೋನಿಯಾ ಹಾಗೂ ರಾಹುಲ್ ಭೇಟಿ ನೀಡಿದ್ದರು. ಅಲ್ಲದೇ ಗಲಭೆಯಿಂದ ತತ್ತರಿಸಿದ್ದ ಜಾಟ್ ಸಮುದಾಯ ಪ್ರಾಬಲ್ಯದ ಬವಾಲಿ ಹಾಗೂ ಖಂಜಾಪುರ ಗ್ರಾಮಗಳಿಗೂ ಅವರು ಭೇಟಿ ನೀಡಿದ್ದರು.

`ನಿಮ್ಮ ದುಖಃವನ್ನು ಹಂಚಿಕೊಳ್ಳುಲು ಬಂದಿರುವೆ' ಎಂದು ಸಂತ್ರಸ್ತರನ್ನು ಸಂತೈಸಲು ಪ್ರಯತ್ನಿದ ಸಿಂಗ್ ನುಡಿದರು.

ಶಿಬಿರಗಳಲ್ಲಿ ಸಂತ್ರಸ್ತರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್, `ಕಳೆದ ವಾರ ನಡೆದ ಗಲಭೆ ಮಹಾ ದುರ್ಘಟನೆ. ಅದರ ಹಿಂದಿನ ಸಂಚುಕೋರರಿಗೆ ಕಠಿಣ ಶಿಕ್ಷೆ ನೀಡಲಾಗುವುದು' ಎಂದರು.

ಅಲ್ಲದೇ `ಪರಿಸ್ಥಿತಿ ಅವಲೋಕನಕ್ಕಾಗಿ ಬಂದಿದ್ದಾಗಿ' ತಿಳಿಸಿದ ಅವರು, `ನಿರಾಶ್ರಿತರನ್ನು ಮನೆಗೆ ಕಳುಸುವ ಹಾಗೂ ಜನರು ಅಭದ್ರತೆ ಕಾಡದಂತೆ ಕ್ರಮಗಳನ್ನು ಕೈಗೊಳುವ ನಿಟ್ಟಿನಲ್ಲಿ ನಮ್ಮ  ಆದ್ಯತೆ ಹಾಗೂ ಪ್ರಯತ್ನವಾಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.