ADVERTISEMENT

ಪ್ರಧಾನಿ ಹೆಸರು ದುರುಪಯೋಗ ಸಿಬಿಐನಿಂದ ಎಫ್‌ಐಆರ್‌

ಪಿಟಿಐ
Published 27 ಅಕ್ಟೋಬರ್ 2017, 19:25 IST
Last Updated 27 ಅಕ್ಟೋಬರ್ 2017, 19:25 IST
ಪ್ರಧಾನಿ ಹೆಸರು ದುರುಪಯೋಗ ಸಿಬಿಐನಿಂದ ಎಫ್‌ಐಆರ್‌
ಪ್ರಧಾನಿ ಹೆಸರು ದುರುಪಯೋಗ ಸಿಬಿಐನಿಂದ ಎಫ್‌ಐಆರ್‌   

ನವದೆಹಲಿ: ಉದ್ದೇಶಿತ ಸಾಲ ಯೋಜನೆಗಾಗಿ ಜನರನ್ನು ಸೆಳೆಯಲು ಪ್ರಧಾನಿ ಹೆಸರು ಬಳಸಿಕೊಂಡಿರುವ ಆರೋಪದ ಮೇಲೆ ಸಿಬಿಐ, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ಪ್ರಧಾನಿ ಹೆಸರಿನಲ್ಲಿ ಸಾಲ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಸುಮಾರು 11 ತಿಂಗಳ ಹಿಂದೆ ಪ್ರಧಾನಿ ಕಾರ್ಯಾಲಯ ಸಿಬಿಐಗೆ ದೂರು ನೀಡಿತ್ತು.

ಕಳೆದ ವರ್ಷ ಜುಲೈ 11ರಂದು ರಾಷ್ಟ್ರಮಟ್ಟದ ಪತ್ರಿಕೆಯೊಂದರಲ್ಲಿ ದುಷ್ಕರ್ಮಿಗಳು ಜನರನ್ನು ತಪ್ಪುದಾರಿಗೆ ಎಳೆಯುವ ಜಾಹೀರಾತು ನೀಡಿದ್ದರು. www.satyamgroup.orgನಲ್ಲಿ 12 ಗಂಟೆಯೊಳಗೆ ಅರ್ಜಿ ಸಲ್ಲಿಸಿದರೆ ಪ್ರಧಾನಮಂತ್ರಿ ಜನ್‌ ಕಲ್ಯಾಣ್‌ ಯೋಜನೆಯ ಅಡಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು, ಸಾಲಕ್ಕೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಮತ್ತು  ಜಾಮೀನುದಾರರ ಅಗತ್ಯವೂ ಇಲ್ಲ ಎಂದು ತಿಳಿಸಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.

ADVERTISEMENT

ಪ್ರಧಾನಿ ಹೆಸರಿನಲ್ಲಿ ಯೋಜನೆಯನ್ನು ನಕಲು ಮಾಡುವ ಅಥವಾ ಅನುಕರಿಸುವ ಕೃತ್ಯ ಇದಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.