ADVERTISEMENT

ಪ್ರವಾಹ: 40 ಶವ ಪತ್ತೆ; ಸಾವಿನ ಸಂಖ್ಯೆ 190

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 9:50 IST
Last Updated 21 ಜೂನ್ 2013, 9:50 IST

ಡೆಹ್ರಾಡೂನ್(ಪಿಟಿಐ): `ಹಿಮಾಲಯದ ಸುನಾಮಿ' ಎಂದೇ ಬಣ್ಣಿಸಲಾದ ಉತ್ತರಾಖಂಡದ ಮಹಾಮಳೆಗೆ ಸಾವಿರಕ್ಕೂ ಹೆಚ್ಚು ಜನ ಕೊಚ್ಚಿಹೋಗಿದ್ದು, ಶುಕ್ರವಾರ ಹರಿದ್ವಾರದಲ್ಲಿ 40 ಜನರ ಶವ ಪತ್ತೆಯಾಗಿವೆ.

40 ಜನರ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಸತ್ತವರ ಸಂಖ್ಯೆ 190ಕ್ಕೆ ಏರಿದೆ.

ಕೇದಾರನಾಥ, ಬದರಿನಾಥ ಪ್ರದೇಶದಲ್ಲಿ ಪ್ರವಾಹ ಸಂಕಷ್ಟದಲ್ಲಿ ಸಿಲುಕಿರುವ 9 ಸಾವಿರ ಜನರ ಸಂರಕ್ಷಣೆಗೆ 40 ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಮಹಾಮಳೆಯ `ದುರ್ಘಟನೆ ಅಸಹನೀಯ'ವಾಗಿದೆ ಎಂದು ಉತ್ತರಾಖಂಡದ ಪ್ರಧಾನ ಕಾರ್ಯದರ್ಶಿ ರಾಕೇಶ್ ಶರ್ಮ ನೋವು ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.