ನವದೆಹಲಿ(ಪಿಟಿಐ): ಒಂದು ಕಡೆ ದೇಶ ‘ಲವ್ ಜಿಹಾದ್’ಎಂಬ ಪರಿಕಲ್ಪನೆಯನ್ನು ಎದುರಿಸುತ್ತಿದ್ದರೆ ಮತ್ತೊಂದೆಡೆ ಈ ಪರಿಕಲ್ಪನೆಗೆ ಸಂಪೂರ್ಣ ವಿರುದ್ಧವಾಗಿ ‘ಲವ್ ಕಮಾಂಡೋಸ್’ ಎಂಬ ಸಂಸ್ಥೆ ಪ್ರೇಮಿಗಳನ್ನು ಒಂದು ಮಾಡುವ ಕಾರ್ಯದಲ್ಲಿ ನಿರತವಾಗಿದೆ.
‘ವಿವಾಹಕ್ಕೆ ಕಾನೂನು ಸಮ್ಮತ ವಯಸ್ಸನ್ನು ಹೊಂದಿದ ಸುಮಾರು 30,000 ಪ್ರೇಮಿಗಳನ್ನು ಕೇವಲ 4 ವರ್ಷಗಳಲ್ಲಿ ಒಂದು ಮಾಡಿದ್ದೇವೆ’ ಎಂದು ಲವ್ ಕಮಾಂಡೋಸ್ ಹೆಮ್ಮೆಯಿಂದ ಹೇಳಿಕೊಂಡಿದೆ.
ಈ ಸಂಸ್ಥೆ ದೆಹಲಿಯ ಪಹಾರ್ಗಂಜ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರೇಮಿಗಳನ್ನು ರಕ್ಷಿಸಿ ಅವರಿಗೆ ವಸತಿ ಸೌಲಭ್ಯ ಕೊಟ್ಟು ಆಶ್ರಯ ನೀಡುತ್ತದೆ.
ಆರ್ಟಿಐ ಅಡಿ ಮಾಹಿತಿ: ಕಾರಣ ನೀಡಲು ಹೈಕೋರ್ಟ್ ಸೂಚನೆ
ನವದೆಹಲಿ (ಪಿಟಿಐ): ಮಾಹಿತಿ ಹಕ್ಕು ಆಂದೋಲನಕ್ಕೆ ಭಾರಿ ಹಿನ್ನಡೆಯಾಗುವಂತೆ ಮದ್ರಾಸ್್ ಹೈಕೋರ್ಟ್್, ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸುವವರು ಸೂಕ್ತ ಕಾರಣ ನೀಡಬೇಕು ಎಂದು ಆದೇಶಿಸಿದೆ.
‘ಯಾವುದೇ ಕಾರಣ ಇಲ್ಲದೇ ಮಾಹಿತಿ ಕೇಳುವವರಿಗೆ ಮಾಹಿತಿ ನೀಡುವುದು ಕಡ್ಡಾಯವಲ್ಲ’ ಎಂದು ಕೋರ್ಟ್ ಹೇಳಿದೆ.
ಆದರೆ ಈ ಕಾಯ್ದೆಯ ಸೆಕ್ಷನ್ ೬ (೨)ರಲ್ಲಿ, ಅರ್ಜಿದಾರರು ಮಾಹಿತಿ ಕೇಳುವಾಗ ಕಾರಣ ನೀಡಬೇಕಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.