ADVERTISEMENT

ಫೇಸ್ ಬುಕ್ ನಲ್ಲಿ ಗಾಂಧೀಜಿ ಬಗ್ಗೆ ಅವಹೇಳನ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 12:15 IST
Last Updated 13 ಅಕ್ಟೋಬರ್ 2012, 12:15 IST

ಜೈಪುರ (ಪಿಟಿಐ) : ಮಹಾತ್ಮಾ ಗಾಂಧೀಜಿಯವರ ಗೌರವಕ್ಕೆ ಧಕ್ಕೆ ತರುವಂತಹ ಅಭಿಪ್ರಾಯಗಳನ್ನು ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಪ್ರಚುರ ಪಡಿಸಿದ ಆರೋಪದ ಮೇಲೆ ಗುಜರಾತ್ ನಿವಾಸಿ ದಾತಾರ್ ಸಿಂಗ್ ರಾಥೋಡ್ ವಿರುದ್ಧ ಇಲ್ಲಿನ ಶಿಫ್ರ ಪಥ್ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ.

ಗುಜರಾತ್‌ನ ಗಾಂಧಿ ಧಾಮದಲ್ಲಿ ವಾಸವಾಗಿರುವ ದತಾರ್ ಸಿಂಗ್, ಗಾಂದಿ ಜಯಂತಿಯಂದು ಫೇಸ್‌ಬುಕ್‌ಗೆ ಗಾಂಧೀಜಿಯ ಭಾವಚಿತ್ರವನ್ನು ಸೇರಿಸಿದ್ದು, ಗಾಂಧೀಜಿ ಗೌರವಕ್ಕೆ ಧಕ್ಕೆ ತರುವಂತಹ ಕೆಲವೊಂದು ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸ್ಥಳೀಯ ನಿವಾಸಿ ವಿನಾಯಕ ಶರ್ಮಾ  ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 153(ಬಿ) 504, 66ಎ ಅನ್ವಯ ದಾತಾರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.