ADVERTISEMENT

ಬಗೆಹರಿಯದ ಬಿಕ್ಕಟ್ಟು, ಮುಗಿಯದ ಕಸರತ್ತು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 13:25 IST
Last Updated 8 ಮಾರ್ಚ್ 2011, 13:25 IST

ಚೆನ್ನೈ/ನವದೆಹಲಿ  (ಪಿಟಿಐ): ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿ ಉಳಿಸುವ ಕಸರತ್ತು ಮಂಗಳವಾರವೂ ನಡೆದಿದ್ದರೂ ಸಂಜೆಯವರೆಗೆ ಯಾವುದೇ ಸಕರಾತ್ಮಕ ಫಲಿತಾಂಶ ದೊರೆಯದೆ ಯಥಾಸ್ಥಿತಿ ಮುಂದುವರೆದಿದೆ.

ಡಿಎಂಕೆ ನಾಯಕರಾದ ಆಳಗಿರಿ ಹಾಗೂ ದಯಾನಿಧಿ ಮಾರನ್ ಅವರು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಚೆನ್ನೈನ ಡಿಎಂಕೆ ಪಕ್ಷದ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಂಕೆ ನಾಯಕ ಇಳಾಂಗೋವನ್ ಅವರು ಯಥಾಸ್ಥಿತಿ ಮುಂದುವರೆದಿದೆ ಎಂದು ತಿಳಿಸಿದರು.

ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಡಿಎಂಕೆ ಅಧ್ಯಕ್ಷ ಕರುಣಾನಿಧಿ ಅವರ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಅತ್ತ ನವದೆಹಲಿಯಲ್ಲಿ ಡಿಎಂಕೆ ನಾಯಕಿ ಕನಿಮೋಳಿ ಅವರು ಬಿಕ್ಕಟ್ಟು ಶೀಘ್ರ ಶಮನವಾಗುವ ಸಾಧ್ಯತೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೆ ಮಂಗಳವಾರ ಸಂಜೆ ಡಿಎಂಕೆ ಮುಖಂಡರಾದ ದಯಾನಿಧಿ ಮಾರನ್ ಅವರು ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದು, ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.