ADVERTISEMENT

ಬಾಂಬ್ ನಿರೋಧಕ ವಾಹನ ಶವಪೆಟ್ಟಿಗೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): ನಕ್ಸಲೀಯರ ಪ್ರಭಾವವಿರುವ ರಾಜ್ಯಗಳಲ್ಲಿ ಸಿಆರ್‌ಪಿಎಫ್ ಯೋಧರು ಬಳಸುತ್ತಿರುವ ನೆಲಬಾಂಬ್ ನಿರೋಧಕ ವಾಹನಗಳು ನಿರೀಕ್ಷಿತ ಫಲಿತಾಂಶ ನೀಡದೆ ಅನೇಕರ ಸಾವು, ನೋವುಗಳಿಗೆ ಕಾರಣವಾಗಿದ್ದು `ಗಾಲಿಗಳ ಮೇಲಿನ ಶವಪೆಟ್ಟಿಗೆ~ಗಳಾಗಿ ಮಾರ್ಪಟ್ಟಿವೆ. ಹೀಗಾಗಿ ಸಿಆರ್‌ಪಿಎಫ್ ಪರ್ಯಾಯ ವಾಹನಗಳಿಗಾಗಿ ಶೋಧ ನಡೆಸಿದೆ.

ಕಳೆದ ವರ್ಷ 150ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ನಕ್ಸಲೀಯರು ಹುದುಗಿಸಿಟ್ಟ ನೆಲಬಾಂಬ್ ಸ್ಫೋಟಗಳಿಗೆ ಬಲಿಯಾಗಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ನೆಲಬಾಂಬ್ ನಿರೋಧಕ ವಾಹನಗಳೂ ಸ್ಫೋಟಗೊಂಡಿವೆ. ಹೀಗಾಗಿ ಈ ವಾಹನಗಳ ಬಳಕೆಯನ್ನು ಕಡಿಮೆ ಮಾಡುವಂತೆ ಸೂಚಿಸಲಾಗಿದ್ದು, ಕಾಲ್ನಡಿಗೆಯಲ್ಲಿ ಗಸ್ತು ತಿರುಗುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.