ADVERTISEMENT

ಬಾಬರಿ ಮಸೀದಿ ಪ್ರಕರಣ ಉಗ್ರರ ದಾಳಿಗೆ ಹೋಲಿಕೆ ಮಾಡಲಾಗದು - ಮಲಿಕ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 11:00 IST
Last Updated 15 ಡಿಸೆಂಬರ್ 2012, 11:00 IST

ನವದೆಹಲಿ (ಐಎಎನ್‌ಎಸ್): ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಉಗ್ರರ ದಾಳಿಗೆ ಹೋಲಿಕೆ ಮಾಡುವುದನ್ನು ಶನಿವಾರ ನಿರಾಕರಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ರೆಹಮಾನ್ ಮಲಿಕ್ ಅವರು ಕಾರ್ಗಿಲ್ ಕಾರ್ಯಾಚರಣೆಯ ಹುತಾತ್ಮ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರ ಸಾವಿನ ಪ್ರಕರಣ ಕುರಿತಂತೆ ತನಿಖೆ ನಡೆಸುವ ಭರವಸೆ ನೀಡಿದರು.

ಮೂರು ದಿನಗಳ ಭಾರತ ಭೇಟಿಗಾಗಿ ಶುಕ್ರವಾರ ಇಲ್ಲಿಗೆ ಆಗಮಿಸಿದ ಮಲಿಕ್ ಅವರು ಎನ್‌ಡಿಟಿವಿ ಸುದ್ಧಿ ವಾಹಿನಿಯೊಂದಿಗೆ ಮಾತನಾಡುತ್ತ `1992ರ ಡಿಸೆಂಬರ 6ರಂದು ನಡೆದ ಬಾಬರಿ ಮಸೀದಿ ಧ್ವಂಸ ಕೃತ್ಯವನ್ನು ಉಗ್ರರ ಕೃತ್ಯದೊಂದಿಗೆ ಹೋಲಿಕೆ ಮಾಡಲಾಗದು' ಎಂದು ಹೇಳಿದರು.

`ನಾನಿಲ್ಲಿ ಪ್ರೀತಿ ಮತ್ತು ಶಾಂತಿ ಸಂದೇಶ ಹೊತ್ತು ಬಂದಿದ್ದೇನೆ. ಉಭಯ ದೇಶಗಳು ಶಾಂತಿ ಹಾಗೂ ಪ್ರೀತಿಯ ಮಾರ್ಗದಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಬೇರೆ ಆಯ್ಕೆಗಳಿಲ್ಲ' ಎಂದು ತಿಳಿಸಿದರು.

`ನಾನು ಬಾಬರಿ ವಿಷಯಕ್ಕೆ ಬಂದಾಗ ಅದನ್ನು ಉಗ್ರರ ಕೃತ್ಯದೊಂದಿಗೆ ಹೋಲಿಸಲಾರೆ. ಕೆಟ್ಟ ಘಟನೆಗಳನ್ನು ಮರೆಯಬೇಕು. ಅಲ್ಲದೇ, ಅಂತಹ ಪ್ರಕರಣಗಳನ್ನು ಹೋಲಿಕೆ ಮಾಡಬಾರದು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.