ADVERTISEMENT

ಬಿಜೆಪಿಯಿಂದ ಅಸಹಿಷ್ಣುತೆ: ಶಿವಸೇನಾ ಟೀಕೆ

ಪಿಟಿಐ
Published 16 ಅಕ್ಟೋಬರ್ 2017, 19:33 IST
Last Updated 16 ಅಕ್ಟೋಬರ್ 2017, 19:33 IST

ಮುಂಬೈ: ‘ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆಗಳ ಬಗ್ಗೆ ಬಿಜೆಪಿ ಅಸಹಿಷ್ಣುತೆ ತೋರುತ್ತಿದೆ. ಆದರೆ, ಇದೇ ಮಾಧ್ಯಮಗಳು ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು’ ಎಂದು ಶಿವಸೇನಾ ಟೀಕಿಸಿದೆ.

ಟೀಕೆಗಳ ಬಗ್ಗೆ ಅಸಹಿಷ್ಣುತೆ ತೋರುವ ಬದಲು ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಬರೆದಿದೆ.

ಪ್ರಧಾನಮಂತ್ರಿ, ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಗೆ ಅವಮಾನ ಮಾಡಬಾರದು. ಜನರು ತಾಳ್ಮೆಯಿಂದ ಇರಬೇಕು ಎಂದು ಬಿಜೆಪಿ ಬಯಸುತ್ತಿದೆ. ಆದರೆ ಇದೇ ತಾಳ್ಮೆ ಮತ್ತು ಉತ್ತಮ ನಡವಳಿಕೆಗಳು ಡಾ. ಮನಮೋಹನ್‌ ಸಿಂಗ್‌ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ, ಅವರನ್ನು ತಮಾಷೆ ಮಾಡುವಾಗ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದೆ.

ADVERTISEMENT

ಬೇರೆಯವರಿಗೆ ತೋಡಿದ ಹಳ್ಳಕ್ಕೆ ತಾನೇ ಬಿದ್ದಂತಾಗಿದೆ ಬಿಜೆಪಿಯ ಸ್ಥಿತಿ ಎಂದು ವ್ಯಂಗ್ಯ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.