ನವದೆಹಲಿ (ಐಎಎನ್‌ಎಸ್): ಉತ್ತರಾಖಂಡನಲ್ಲಿ ಮಹಾಮಳೆಯಿಂದ ತೀವ್ರ ಸಂಕಷ್ಟ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನ ಉದ್ದೇಶಿತ `ಜೈಲ್‌ಭರೋ' ಚಳವಳಿಯನ್ನು ಶನಿವಾರ ಎರಡನೇಯ ಬಾರಿಗೆ ಮುಂದೂಡಿದೆ.
ಯುಪಿಎ ಸರ್ಕಾರದ `ಹಗರಣಗಳು, ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ಸಂವಿಧಾನಿಕ ಸಂಸ್ಥೆಗಳ ದುರ್ಬಳಕೆ' ವಿರೋಧಿಸಿ ಬಿಜೆಪಿಯು ಮೇ 27 ರಿಂದ ಜೂನ್ 2 ರ ವರೆಗೆ `ಜೈಲ್‌ಭರೋ' ಚಳವಳಿ ನಡೆಸಲು ಉದ್ದೇಶಿಸಿತ್ತು. ಆದರೆ ಛತ್ತೀಸಗಢ್‌ದಲ್ಲಿ ಕಾಂಗ್ರೆಸ್ ಮುಖಂಡರ ಮೇಲೆ ನಕ್ಸಲರ ದಾಳಿ ನಡೆದ ಹಿನ್ನೆಲೆಯಲ್ಲಿ ಚಳುವಳಿಯನ್ನು ಮುಂದೂಡಲಾಗಿತ್ತು. ಇದೀಗ ಉತ್ತರಾಖಂಡ ಪ್ರವಾಹದ ಹಿನ್ನೆಲೆಯಲ್ಲಿ ಶನಿವಾರ ಎರಡನೇಯ ಬಾರಿಗೆ ಚಳವಳಿಯನ್ನು ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.