ADVERTISEMENT

ಬಿಪಿಎಲ್ ಕುಟುಂಬಗಳಿಗೆ ನಗದು ಸಬ್ಸಿಡಿ, ರೈತರಿಗೆ ಹೆಚ್ಚಿನ ಸಾಲ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 8:20 IST
Last Updated 28 ಫೆಬ್ರುವರಿ 2011, 8:20 IST
ಬಿಪಿಎಲ್ ಕುಟುಂಬಗಳಿಗೆ ನಗದು ಸಬ್ಸಿಡಿ, ರೈತರಿಗೆ ಹೆಚ್ಚಿನ ಸಾಲ
ಬಿಪಿಎಲ್ ಕುಟುಂಬಗಳಿಗೆ ನಗದು ಸಬ್ಸಿಡಿ, ರೈತರಿಗೆ ಹೆಚ್ಚಿನ ಸಾಲ   

ನವದೆಹಲಿ (ಪಿಟಿಐ/ ಐಎಎನ್ಎಸ್): ರೈತರ ಸಾಲದ ಹರಿವು ಹೆಚ್ಚಳ, ಆದಾಯ ತೆರಿಗೆ ವಿನಾಯ್ತಿ ಮಿತಿ 20, 000 ರೂಪಾಯಿಗಳಷ್ಟು  ಏರಿಕೆ, ದಾರಿದ್ರ್ಯ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಇಂಧನ, ಗೊಬ್ಬರಕ್ಕೆ ನಗದು ಸಬ್ಸಿಡಿ, ವೃದ್ಧರಿಗೆ ವಯೋಮಿತಿ ರಿಯಾಯ್ತಿ ವಯೋಮಿತಿ ಇಳಿಕೆ, ಕಿರು ಹಣಕಾಸು ಕಂಪೆನಿಗಳಿಗೆ ರೂ.100 ಕೋಟಿಯ ನಿಧಿ, ಮಹಿಳಾ ಸ್ವ ಸಹಾಯ ನಿಧಿಗೆ ತಜ್ಞರ ಸಮಿತಿ ರಚನೆ, ಕಾರ್ಪೋರೇಟ್ ಬಾಂಡ್ ಗಳಲ್ಲಿ ವಿದೇಶೀ ಸಾಂಸ್ಥಿಕ ಹಣ ಹೂಡಿಕೆಗೆ ಹೆಚ್ಚಿನ ಅವಕಾಶ,  ಉತ್ತಮ ಮಳೆಗಾಗಿ ವರುಣ ದೇವನಿಗೆ ಪ್ರಾರ್ಥನೆ-

ಇತ್ಯಾದಿ ಮುಖ್ಯಾಂಶಗಳನ್ನು ಒಳಗೊಂಡ 2011-12ರ ಸಾಲಿನ ಮುಂಗಡಪತ್ರವನ್ನು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸಂಸತ್ತಿನಲ್ಲಿ ಸೋಮವಾರ ಮಂಡಿಸಿದ್ದಾರೆ.

ಬಜೆಟ್ ಮಂಡನೆಗೆ ಮುನ್ನ ನಡೆದ ಕೇಂದ್ರ ಸಚಿವ ಸಂಪುಟದ ಸಭೆ ಮುಂಗಡಪತ್ರಕ್ಕೆ ಅನುಮೋದನೆ ನೀಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.