ADVERTISEMENT

ಬಿಹಾರ ಪೊಲೀಸರ ಸಾಮೂಹಿಕ ರಜೆ ಚಳವಳಿ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 9:15 IST
Last Updated 10 ಅಕ್ಟೋಬರ್ 2012, 9:15 IST

ಪಟ್ನಾ(ಪಿಟಿಐ): ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 10ರಿಂದ 5 ದಿನಗಳ ಕಾಲ ಸಾಮೂಹಿಕ ರಜೆಯ ಮೇಲೆ ತೆರಳುವುದಾಗಿ  ಬೆದರಿಕೆ  ಒಡ್ಡಿದ್ದ ಬಿಹಾರದ ಸುಮಾರು 70,000 ಪೊಲೀಸರು ಪೊಲೀಸ್ ಮಹಾನಿರ್ದೇಶಕರ ಭರವಸೆ ಹಿನ್ನೆಲೆಯಲ್ಲಿ ತಮ್ಮ ಚಳವಳಿಯನ್ನು ನವೆಂಬರ್ 30ರ ತನಕ ಮುಂದೂಡಿದ್ದಾರೆ.

 ಬಿಹಾರ ಪೊಲೀಸ್ ಸಿಬ್ಬಂದಿ ಸಂಘದ ನಿಯೋಗವು ಪೊಲೀಸ್ ಮಹಾನಿರ್ದೇಶಕರ ಅಭಯಾನಂದ ಅವರನ್ನು ಬೇಟಿ ಮಾಡಿದಾಗ ಅವರು ಬೇಡಿಕೆ ಈಡೇರಿಕೆ ಬಗ್ಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಚಳವಳಿಯನ್ನು  ನವೆಂಬರ್  30ಕ್ಕೆ ಮುಂದೂಡಲು ನಿರ್ಧರಿಸಲಾಯಿತು ಎಂದು ಬಿಹಾರ ಪೊಲೀಸ್ ಸಿಬ್ಬಂದಿ ಸಂಘದ ಅಧ್ಯಕ್ಷ ಜಿತೇಂದ್ರ ನಾರಾಯಣ ಸಿಂಗ್ ಪಿಟಿಐಗೆ ತಿಳಿಸಿದರು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆಯಲ್ಲಿ ಪೊಲೀಸರ ಬೇಡಿಕೆಗಳ ಬಗ್ಗೆ ಚರ್ಚಿಸಲು ಕಾಲಾವಕಾಶ ಬೇಕು ಎಂದು ಅಭಯಾನಂದ ಹೇಳಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT