ADVERTISEMENT

‘ಬೇಟಿ ಬಚಾವೋ’ದಿಂದ ‘ಬೇಟ ಬಚಾವೋ’ ಕಡೆಗೆ ಸರ್ಕಾರ: ರಾಹುಲ್‌

ಏಜೆನ್ಸೀಸ್
Published 10 ಅಕ್ಟೋಬರ್ 2017, 10:24 IST
Last Updated 10 ಅಕ್ಟೋಬರ್ 2017, 10:24 IST
‘ಬೇಟಿ ಬಚಾವೋ’ದಿಂದ ‘ಬೇಟ ಬಚಾವೋ’ ಕಡೆಗೆ ಸರ್ಕಾರ: ರಾಹುಲ್‌
‘ಬೇಟಿ ಬಚಾವೋ’ದಿಂದ ‘ಬೇಟ ಬಚಾವೋ’ ಕಡೆಗೆ ಸರ್ಕಾರ: ರಾಹುಲ್‌   

ನವದೆಹಲಿ: ಕೇಂದ್ರ ಸರ್ಕಾರವು ಬೇಟಿ ಬಚಾವೋ(ಹೆಣ್ಣು ಮಗು ಉಳಿಸಿ)ದಿಂದ ಬೇಟ ಬಚಾವೋ(ಗಂಡು ಮಗು ಉಳಿಸಿ) ಕಾರ್ಯದತ್ತ ಹೊರಳಿದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಪುತ್ರ ಜಯ್  ಷಾ ಕಂಪೆನಿಯ ವಹಿವಾಟಿನಲ್ಲಿ ಭಾರಿ ಪ್ರಮಾಣದ ಏರಿಕೆ ಆಗಿರುವ ಕುರಿತು ವರದಿಯಲ್ಲಿ ಆರೋಪಿಸಲಾಗಿದೆ. ಈ ವಿಚಾರದಲ್ಲಿ ಹಲವು ಕೇಂದ್ರ ಸಚಿವರು ಜಯ್‌ ಷಾ ಬೆಂಬಲಕ್ಕೆ ನಿಂತಿದ್ದು, ಈ ಸಂಬಂಧ ರಾಹುಲ್‌ ಗಾಂಧಿ ಟ್ವಿಟರ್‌ ಮೂಲಕ ಟೀಕಿಸಿದ್ದಾರೆ.

ಜಯ್‌ ಷಾ ಕಂಪನಿ ವಹಿವಾಟಿನ ಕುರಿತು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಸಮರ್ಥನೆ ನೀಡಿರುವ ವರದಿಯನ್ನು ಉಲ್ಲೇಖಿಸಿ ‘ಹೆಣ್ಣು ಮಗು ಉಳಿಸಿ ಕಾರ್ಯದಿಂದ ಗಂಡು ಮಗು ಉಳಿಸುವ ಕಡೆಗೆ ಅದ್ಭುತ ಪರಿವರ್ತನೆ’ ಎಂದು ಟ್ವೀಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.