ADVERTISEMENT

ಬ್ಯಾಂಕಿನ ವ್ಯಾನಿನಿಂದ ರೂ.1.75 ಕೋಟಿ ಲೂಟಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 12:37 IST
Last Updated 9 ಡಿಸೆಂಬರ್ 2013, 12:37 IST

ಚಂಡಿಗಢ (ಐಎಎನ್ಎಸ್): ಖಾಸಗಿ ಬ್ಯಾಂಕಿನ ವ್ಯಾನ್ ತಡೆದ ರಿವಾಲ್ವರ್‌ ಹಿಡಿದುಕೊಂಡಿದ್ದ ನಾಲ್ವರು ಯುವಕರು, 1.75 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತ ನಗದು ದೋಚಿದ ಘಟನೆ ಹರಿಯಾಣದ ಪಂಚಕುಲಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಹರಿಯಾಣದಿಂದ 25ಕಿ.ಮೀ ದೂರದಲ್ಲಿರುವ ಪಂಚಕುಲಾ ಕಡೆಗೆ ಬರುತ್ತಿದ್ದ ವ್ಯಾನನ್ನು ಪಿಂಜೋರ್ ಬಳಿ ತಡೆದ ಶಸ್ತ್ರಾಸ್ತ್ರಧಾರಿ ಸಜ್ಜಿತ ಯುವಕರು, ನಗದು ದೋಚಿದ್ದಾರೆ ಎಂದು ಪೊಲೀಸ್‌ಅಧಿಕಾರಿಗಳು ತಿಳಿಸಿದ್ದಾರೆ.

‘ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಪಂಚಕುಲಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.