ADVERTISEMENT

ಬ್ಯಾಂಕ್‍ ಸರತಿ ಸಾಲಿನಲ್ಲಿ ನಿಂತಿದ್ದ ರೈತ ಕುಸಿದು ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 12:46 IST
Last Updated 4 ಡಿಸೆಂಬರ್ 2016, 12:46 IST
ಬ್ಯಾಂಕ್‍ ಸರತಿ ಸಾಲಿನಲ್ಲಿ ನಿಂತಿದ್ದ ರೈತ ಕುಸಿದು ಬಿದ್ದು ಸಾವು
ಬ್ಯಾಂಕ್‍ ಸರತಿ ಸಾಲಿನಲ್ಲಿ ನಿಂತಿದ್ದ ರೈತ ಕುಸಿದು ಬಿದ್ದು ಸಾವು   

ತಂಜಾವೂರು: ಇಲ್ಲಿನ ವಾಜಕೈ ಗ್ರಾಮದ ನಿವಾಸಿ 70ರ ಹರೆಯದ ರೈತರೊಬ್ಬರು ಬ್ಯಾಂಕ್‍ನಿಂದ ಹಣ ಪಡೆಯಲು ಸರತಿ ಸಾಲಿನಲ್ಲಿ  ನಿಂತಿದ್ದಾಗ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಪಾಪನಾಶನಂ ಇಂಡಿಯನ್ ಬ್ಯಾಂಕ್‍ನಲ್ಲಿ ಈ ರೈತ ಸುಬ್ರಮಣ್ಯನ್ ಎಂಬವರು ಖಾತೆ ಹೊಂದಿದ್ದರು.

ಶನಿವಾರ ಬ್ಯಾಂಕ್‍ನ ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಂತಿದ್ದ ಸುಬ್ರಮಣ್ಯನ್ ಅಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ವೈದ್ಯರನ್ನು ಕರೆ ತಂದಿದ್ದರೂ, ವೈದ್ಯರು ಬರುವ ಮುನ್ನ ಸುಬ್ರಮಣ್ಯನ್ ಅವರ ಉಸಿರು ನಿಂತಿತ್ತು.

ADVERTISEMENT

ಸುಬ್ರಮಣ್ಯನ್ ಅವರು ಪತ್ನಿಯೊಂದಿಗೆ ಬ್ಯಾಂಕ್‍ಗೆ ಬಂದಿದ್ದರು.

ಅವರ ಖಾತೆಯಲ್ಲಿ 17,000 ರೂಪಾಯಿ ಇತ್ತು. ತಮ್ಮ ಹಳ್ಳಿಯಿಂದ ದೂರವಿರುವ ಬ್ಯಾಂಕ್‍ಗೆ ಬರುವಾಗ ಬೆಳಗ್ಗಿನ ತಿಂಡಿ ಕೂಡಾ ಅವರು ಸೇವಿಸಿರಲಿಲ್ಲ.

ತುಂಬಾ ಹೊತ್ತು ಸಾಲಿನಲ್ಲಿ ನಿಂತು ದಣಿವಾಗಿದ್ದ ಅವರು, ದುಡ್ಡು ಪಡೆಯಲು ನಿಂತ ಸರತಿ ಸಾಲು ಕೌಂಟರ್ ಹತ್ತಿರ ತಲುಪುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ ಎಂದು ಬ್ಯಾಂಕ್ ನೌಕರರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.