ADVERTISEMENT

ಬ್ರಹ್ಮೋಸ್ ಕ್ಷಿಪಣಿ ಪರೀಕ್ಷಾರ್ಥ ಉಡ್ಡಯನ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 8:25 IST
Last Updated 7 ಅಕ್ಟೋಬರ್ 2012, 8:25 IST

ಪಣಜಿ (ಪಿಟಿಐ): ಸುಮಾರು 300 ಕೆ.ಜಿ ತೂಕದ ಸಾಂಪ್ರದಾಯಿಕ ಸಿಡಿತಲೆ ಹೊತ್ತು 290ಕಿ.ಮೀ ದೂರದ ಗುರಿಯನ್ನು  ಕರಾರುವಕ್ಕಾಗಿ ಹೊಡೆದುರುಳಿಸಬಲ್ಲ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಉಡ್ಡಯನವು ಇಲ್ಲಿನ ಗೋವಾ ಕಡಲ ತೀರದಲ್ಲಿ ಭಾನುವಾರ ಯಶಸ್ವಿಯಾಗಿದೆ.
 
ನೂತನವಾಗಿ ಭಾರತ ನೌಕಾದಳಕ್ಕೆ ಸೇರ್ಪಡೆಗೊಂಡಿರುವ ರಷ್ಯಾ ನಿರ್ಮಿತ ನಿರ್ದೇಶಿತ ಕ್ಷಿಪಣಿ ಯುದ್ಧನೌಕೆ ಐಎನ್‌ಎಸ್ ತೆಜ್‌ನಿಂದ ಗೋವಾ ಕಡಲತೀರದಲ್ಲಿ ಭಾನುವಾರ ಬೆಳಗಿನ ಜಾವ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಉಡ್ಡಯನ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪರೀಕ್ಷಾರ್ಥ ಉಡ್ಡಯನದಲ್ಲಿ ಕ್ಷಿಪಣಿಯು ಪೂರ್ವಯೋಜಿತ ಗುರಿಯನ್ನು ಯಶಸ್ವಿಯಾಗಿ ಬೇಧಿಸಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.