ADVERTISEMENT

ಭಾಗಲ್ಪುರ ಕೋಮುಗಲಭೆ: ಕೇಂದ್ರ ಸಚಿವನ ಮಗನ ವಿರುದ್ಧ ಪ್ರಕರಣ

ಪಿಟಿಐ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಭಾಗಲ್ಪುರ ಕೋಮುಗಲಭೆ: ಕೇಂದ್ರ ಸಚಿವನ ಮಗನ ವಿರುದ್ಧ ಪ್ರಕರಣ
ಭಾಗಲ್ಪುರ ಕೋಮುಗಲಭೆ: ಕೇಂದ್ರ ಸಚಿವನ ಮಗನ ವಿರುದ್ಧ ಪ್ರಕರಣ   

ಪಟ್ನಾ: ‘ಭಾಗಲ್ಪುರದಲ್ಲಿ ಈಚೆಗೆ ನಡೆದ ಕೋಮುಗಲಭೆ ಸಂಬಂಧ, ರಾಜಕೀಯ ಒತ್ತಡಕ್ಕೆ ಒಳಗಾಗಿ ಪೊಲೀಸರು ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಪುತ್ರ ಅರಿಜಿತ್ ಶಾಶ್ವತ್ ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಮತ್ತೊಂದು ಸಮುದಾಯದ ಆರೋಪಿಗಳ ವಿರುದ್ಧ ಈವರೆಗೂ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಶ್ವತ್ ಪ್ರಶ್ನಿಸಿದ್ದಾರೆ.

ಈ ಪ್ರಕರಣದಲ್ಲಿ ಎರಡು ಎಫ್‌ಐಆರ್ ದಾಖಲಾಗಿದ್ದು, ಒಂದರಲ್ಲಿ ಶಾಶ್ವತ್ ಹಾಗೂ ಇತರೆ ಒಂಬತ್ತು ಜನರ ಹೆಸರು ಉಲ್ಲೇಖವಾಗಿದೆ. ಇವರೆಲ್ಲರ ವಿರುದ್ಧ ಭಾಗಲ್ಪುರ ನ್ಯಾಯಾಲಯ ಶನಿವಾರ ಬಂಧನ ವಾರಂಟ್ ಹೊರಡಿಸಿದೆ.

ADVERTISEMENT

ಇದೇ ವೇಳೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕೇಂದ್ರ ಕಚೇರಿ) ಎಸ್‌.ಕೆ. ಸಿಂಘಾಲ್ ಅವರು, ಭಾಗಲ್ಪುರದಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ಉಲ್ಲೇಖವಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಾರ್ಚ್‌ 17ರಂದು ಹಿಂದೂ ‍ಹೊಸ ವರ್ಷದ ಸಲುವಾಗಿ ಶಾಶ್ವತ್ ನೇತೃತ್ವದಲ್ಲಿ ನಡೆದ ಮೆರವಣಿಗೆ, ಅಲ್ಪಸಂಖ್ಯಾತರು ಹೆಚ್ಚಾಗಿ ಇರುವ ನಾಥನಗರ್‌ ಮಾರ್ಗವಾಗಿ ಹಾದುಹೋಗಿತ್ತು. ಇದಾದ ಬಳಿಕ ಸಂಘರ್ಷ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.