ADVERTISEMENT

ಭಾರತದ ಫೇಸ್‌ಬುಕ್ ನಿರ್ವಹಣಾಧಿಕಾರಿ ಸ್ಥಾನಕ್ಕೆ ವಿದಾಯ ಹೇಳಿದ ಉಮಂಗ್ ಬೇಡಿ

ಪಿಟಿಐ
Published 10 ಅಕ್ಟೋಬರ್ 2017, 12:45 IST
Last Updated 10 ಅಕ್ಟೋಬರ್ 2017, 12:45 IST
ಭಾರತದ ಫೇಸ್‌ಬುಕ್ ನಿರ್ವಹಣಾಧಿಕಾರಿ  ಸ್ಥಾನಕ್ಕೆ ವಿದಾಯ ಹೇಳಿದ ಉಮಂಗ್ ಬೇಡಿ
ಭಾರತದ ಫೇಸ್‌ಬುಕ್ ನಿರ್ವಹಣಾಧಿಕಾರಿ ಸ್ಥಾನಕ್ಕೆ ವಿದಾಯ ಹೇಳಿದ ಉಮಂಗ್ ಬೇಡಿ   

ನವದೆಹಲಿ: ಭಾರತದ ಫೇಸ್‌ಬುಕ್ ನಿರ್ವಹಣಾಧಿಕಾರಿ ಉಮಂಗ್ ಬೇಡಿ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ.

ಉಮಂಗ್ ಬೇಡಿ ಅವರಿಂದ ತೆರವುಗೊಂಡ ಸ್ಥಾನಕ್ಕೆ ದಕ್ಷಿಣ ಏಷ್ಯಾದ ಗ್ರಾಹಕ ಮತ್ತು ಮಾಧ್ಯಮದ ನಿರ್ದೇಶಕರಾದ ಸಂದೀಪ್ ಭೂಷಣ್ ಅವರನ್ನು ಹಂಗಾಮಿ ನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದೆ. 

ಉಮಂಗ್ ಬೇಡಿ ಅವರು ಈ ವರ್ಷದ ಕೊನೆಯಲ್ಲಿ ತಮ್ಮ ಸ್ಥಾನಕ್ಕೆ ವಿದಾಯ ಹೇಳುವವರಿದ್ದರು. ಬೇಡಿ ಅವರು ಕಾರ್ಯನಿರ್ವಹಿಸಿದ ಅವಧಿಯಲ್ಲಿ ಉತ್ತಮ ತಂಡವನ್ನು ಹುಟ್ಟುಹಾಕಿದ್ದರು. ಅವರಿಗೆ ಒಳ್ಳೆಯದಾಗಲಿ ಎಂದು ಫೇಸ್‌ಬುಕ್‌ ಕಂಪೆನಿ ಶುಭಹಾರೈಸಿದೆ. 

ADVERTISEMENT

ಬೇಡಿ ಅವರು 2016 ರ ಜೂನ್‌ನಲ್ಲಿ ಫೇಸ್‌ಬುಕ್ ಸಂಸ್ಥೆಗೆ ನಿರ್ವಹಣಾಧಿಕಾರಿಯಾಗಿ ನೇಮಕವಾಗುವ ಮುನ್ನ ದಕ್ಷಿಣ ಏಷ್ಯಾದ ಅಡೋಬಿ ಕಂಪೆನಿಯಲ್ಲಿ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಕೆಲವು ಮೂಲಗಳ ಪ್ರಕಾರ ಬೇಡಿ ಅವರು ಸ್ವಂತ ಹೊಸ ಉದ್ಯಮ ಆರಂಭಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಭಾರತವು ಅಮೆರಿಕದ ನಂತರ ಹೆಚ್ಚು ಫೇಸ್‌ಬುಕ್ ಬಳಕೆದಾರರನ್ನು ಒಳಗೊಂಡ ದೇಶವಾಗಿದೆ. ಪ್ರತಿ ತಿಂಗಳು 201 ಮಿಲಿಯನ್  ಸಕ್ರಿಯ ಬಳಕೆದಾರರರು ಇಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.