ADVERTISEMENT

ಭಾರತೀಯರ ಮೇಲೆ ಬೇಹುಗಾರಿಕೆಗೆ ಮುಂದಾಗಿರುವ 'ಬಿಗ್‌ ಬಾಸ್‌’ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 10:32 IST
Last Updated 26 ಮಾರ್ಚ್ 2018, 10:32 IST
ಭಾರತೀಯರ ಮೇಲೆ ಬೇಹುಗಾರಿಕೆಗೆ ಮುಂದಾಗಿರುವ 'ಬಿಗ್‌ ಬಾಸ್‌’ ಪ್ರಧಾನಿ ಮೋದಿ
ಭಾರತೀಯರ ಮೇಲೆ ಬೇಹುಗಾರಿಕೆಗೆ ಮುಂದಾಗಿರುವ 'ಬಿಗ್‌ ಬಾಸ್‌’ ಪ್ರಧಾನಿ ಮೋದಿ   

ಬೆಂಗಳೂರು: ನಮೋ ಆ್ಯಪ್‌ ಕುರಿತಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪ ಮುಂದುವರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಾರತೀಯರ ಮೇಲೆ ಬೇಹುಗಾರಿಕೆ ನಡೆಸಲು ಮುಂದಾಗಿರುವ ಬಿಗ್‌ ಬಾಸ್‌’ ಎಂದು ಟೀಕಿಸಿದ್ದಾರೆ.

ನಮೋ ಆ್ಯಪ್‌ನಲ್ಲಿ ಸಂಗ್ರಹವಾಗಿರುವ ದತ್ತಾಂಶಗಳನ್ನು ಬಳಕೆದಾರರ ಗಮನಕ್ಕೆ ತರದೆಯೇ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಸೋಮವಾರವೂ ಟ್ವೀಟ್‌ ಮಾಡಿದ್ದಾರೆ. ‘ಮೋದಿ ಅವರ ನಮೋ ಆ್ಯಪ್‌ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಆಡಿಯೊ, ವಿಡಿಯೊ, ಸಂಪರ್ಕ ಪಟ್ಟಿಯನ್ನು ಗೌಪ್ಯವಾಗಿ ಸಂಗ್ರಹಿಸಿಕೊಳ್ಳುತ್ತದೆ. ಜಿಪಿಎಸ್‌ ಮೂಲಕ ನಿಮ್ಮ ಇರುವಿಕೆಯನ್ನು ಪತ್ತೆ ಮಾಡುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT