ADVERTISEMENT

ಮಂಗಳ ನೌಕೆ: ಮೊದಲ ಚಿತ್ರದಲ್ಲಿ ‘ಹೆಲನ್’ ಸೆರೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2013, 14:35 IST
Last Updated 21 ನವೆಂಬರ್ 2013, 14:35 IST

ಚೆನ್ನೈ (ಪಿಟಿಐ): ‘ಕೆಂಪು’ ಗ್ರಹಕ್ಕೆ ರವಾನಿಸಲಾಗಿರುವ ಭಾರತದ  ಮೊದಲ ಮಂಗಳಯಾನ ನೌಕೆ ಗುರುವಾರ ತನ್ನ ಮೊದಲ ಚಿತ್ರಗಳನ್ನು ರವಾನಿಸಿದ್ದು, ಆಂಧ್ರ ಪ್ರದೇಶದ ತೀರಕ್ಕೆ ಅಪ್ಪಳಿಸಲಿರುವ ಭೀಕರ ಚಂಡಮಾರುತ ‘ಹೆಲೆನ್’ ಚಿತ್ರವೂ ಅದರಲ್ಲಿ ಸೇರಿದೆ.

‘ಮಂಗಳಯಾನ’ ನೌಕೆ, ತಾನು ತೆಗೆದ ಭೂಮಿಯ ಮೊದಲ ಚಿತ್ರಗಳನ್ನು ರವಾನಿಸಿದೆ. ಅದರಲ್ಲಿ ಭಾರತ ಉಪಖಂಡ ಹಾಗೂ ಆಫ್ರಿಕಾದ ಭಾಗಗಳೂ ಸೇರಿವೆ ಎಂದು ಇಸ್ರೋ ಗುರುವಾರ ತಿಳಿಸಿದೆ.

ನೌಕೆಯು ಮಂಗಳವಾರ ಚಂಡಮಾರುತದ ಚಿತ್ರವನ್ನು ಸೆರೆ ಹಿಡಿದಿದ್ದು, ಅದು ದಕ್ಷಿಣ ಆಂಧ್ರದ ತೀರ ಪ್ರದೇಶಕ್ಕೆ ಶುಕ್ರವಾರ ಅಪ್ಪಳಿಸುವ ಸಾಧ್ಯತೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.