ADVERTISEMENT

ಮತಗಟ್ಟೆ ಸಮೀಕ್ಷೆ ಪ್ರಸಾರಕ್ಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:56 IST
Last Updated 4 ಏಪ್ರಿಲ್ 2013, 19:56 IST

ನವದೆಹಲಿ (ಪಿಟಿಐ): ಕರ್ನಾಟಕದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮತಗಟ್ಟೆ ಸಮೀಕ್ಷೆಯ ಮುದ್ರಣ ಅಥವಾ ಪ್ರಸಾರಕ್ಕೆ ಕೇಂದ್ರ ಚುನಾವಣಾ ಆಯೋಗವು ನಿಷೇಧ ವಿಧಿಸಿದೆ.

ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಅಥವಾ ಬೇರಾವುದೇ ರೀತಿಯ ಸಮೀಕ್ಷೆಯ ಫಲಿತಾಂಶ ಒಳಗೊಂಡಂತೆ ಚುನಾವಣೆಗೆ ಸಂಬಂಧಿಸಿದ ಯಾವುದೇ ಸಂಗತಿಯನ್ನು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಚುನಾವಣೆ ದಿನವಾದ ಮೇ 5ರ ಚುನಾವಣೆ ಅಂತ್ಯವಾಗುವ ಸಮಯಕ್ಕೆ ಮುಂಚಿನ 48 ಗಂಟೆ ಅವಧಿಯೊಳಗೆ ಪ್ರಕಟಿಸಬಾರದು ಎಂದೂ ಆಯೋಗ ಗುರುವಾರ ಸೂಚಿಸಿದೆ.

ಮತದಾರರ ಮೇಲೆ ಅಥವಾ ನಂತರದ ಫಲಿತಾಂಶದ ಮೇಲೆ ಪ್ರಭಾವ ಬೀರುವ ಯಾವುದೇ ವಿಷಯವನ್ನು ಚುನಾವಣಾ ಸುದ್ದಿ ಎಂದು ಪರಿಗಣಿಸಲಾಗುವುದು. ಇಂತಹ ವಿಷಯದ ಮುದ್ರಣ ಅಥವಾ ಪ್ರಸಾರವು 1951ರ ಜನಪ್ರತಿನಿಧಿ ಕಾಯ್ದೆಯ 126ನೇ ಸೆಕ್ಷನ್‌ನ್ನು ಉಲ್ಲಂಘಿಸಿದಂತಾಗುತ್ತದೆ. ಈ ತಪ್ಪಿಗಾಗಿ 2 ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ, ಇಲ್ಲವೇ ಎರಡನ್ನೂ ವಿಧಿಸಬಹುದು ಎಂದು ಆಯೋಗವು ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.