ADVERTISEMENT

ಮತ್ತೆ ಮಳೆ, ಕಾರ್ಯಾಚರಣೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 11:35 IST
Last Updated 6 ಜುಲೈ 2013, 11:35 IST
- ಸಾಂದರ್ಭಿಕ ಚಿತ್ರ.
- ಸಾಂದರ್ಭಿಕ ಚಿತ್ರ.   

ಡೆಹ್ರಾಡೂನ್ (ಪಿಟಿಐ): ಮೇಘಸ್ಫೋಟದಿಂದ ತತ್ತರಿಸಿರುವ ರುದ್ರಪ್ರಯಾಗ್, ಚಮೋಲಿ ಮತ್ತು ಉತ್ತರಕಾಶಿ ಸೇರಿದಂತೆ ಉತ್ತರಾಖಂಡದ ಹಲವಾರು ಪ್ರದೇಶಗಳಲ್ಲಿ ನಡೆಸುತ್ತಿರುವ ಪರಿಹಾರ ಕಾರ್ಯಾಚರಣೆಗೆ ಶನಿವಾರ ಮಳೆ ಸುರಿದ ಪರಿಣಾಮ ಅಡ್ಡಿ ಉಂಟಾಗಿದೆ. ಹವಾಮಾನದ ವೈಪರಿತ್ಯದಿಂದಾಗಿ ಪರಿಹಾರ ಸಾಮಗ್ರಿ ಸಾಗಿಸಬೇಕಿದ್ದ ಹೆಲಿಕಾಪ್ಟರ್‌ಗಳಿಗೆ ಹಾರಾಟ ನಡೆಸಲು ಸಾಧ್ಯವಾಗಲಿಲ್ಲ.

ಮತ್ತೆ ಸುರಿಯುತ್ತಿರುವ ಮಳೆಯಿಂದಾಗಿ ಭಾಗಿರಥಿ ನದಿಯು ಮತ್ತೊಮ್ಮೆ ಉಕ್ಕಿ ಹರಿಯುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ನದಿಪಾತ್ರದಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಿದೆ ಅಧಿಕಾರಿಗಳು ಹೇಳಿದರು.

ರುದ್ರಪ್ರಯಾಗ್ ಜಿಲ್ಲೆಯ ಕೇದಾರಘಾಟಿ ಪ್ರದೇಶದಲ್ಲಿ ಮಳೆ ಹಾಗೂ ಹವಾಮಾನವು ವೈಪರಿತ್ಯದಿಂದಾಗಿ ಪ್ರವಾಹಪೀಡಿತ ಹಳ್ಳಿಗಳಿಗೆ ಪರಿಹಾರ ಸಾಮಗ್ರಿ ತಲುಪಿಸಬೇಕಾಗಿದ್ದ ಹೆಲಿಕಾಪ್ಟರ್‌ಗಳಿಗೆ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೆಟ್ ದೀಲಿಪ್ ಜವಾಲ್‌ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.