ADVERTISEMENT

ಮತ್ತೊಂದು ಐಎನ್ ಎಸ್ ನೌಕಾ ದುರಂತ: ಕಮಾಂಡರ್ ಸಾವು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 13:10 IST
Last Updated 7 ಮಾರ್ಚ್ 2014, 13:10 IST

ನವದೆಹಲಿ (ಪಿಟಿಐ): ಮುಂಬೈಯ ಮಜಗಾಂವ್ ಡಾಕ್ ಲಿಮಿಟೆಡ್ ನಲ್ಲಿ (ಎಂಡಿಎಲ್) ಅನಿಲ ಸೋರಿಕೆ ಪರಿಣಾಮವಾಗಿ ಭಾರತೀಯ ನೌಕಾಪಡೆಯ ಇನ್ನೊಂದು ನೌಕೆಯಲ್ಲಿ ಶುಕ್ರವಾರ ದುರಂತ ಸಂಭವಿಸಿದ್ದು ಕಮಾಂಡರ್ ಶ್ರೇಣಿಯ ಅಧಿಕಾರಿಯೊಬ್ಬರು ಮೃತರಾಗಿ ಇತರ ಕೆಲವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಂಡಿಎಲ್ ನಿಂದ ನಿರ್ಮಾಣಗೊಳ್ಳುತ್ತಿದ್ದ ಐಎನ್ ಎಸ್ ಕೋಲ್ಕತ್ತ -ದರ್ಜೆಯ ವಿಧ್ವಂಸಕ ನೌಕಾ ಯಾರ್ಡ್ -701ನ ಕಾರ್ಬನ್ ಡೈ- ಆಕ್ಸೈಡ್ ಘಟಕದ ಕಾರ್ಯ ನಿರ್ವಹಣೆಯಲ್ಲಿ ದೋಷ ಉಂಟಾದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ.

ಯಂತ್ರಗಳ ಪರೀಕ್ಷೆ ನಡೆಯುತ್ತಿದ್ದಾಗ ಸಂಭವಿಸಿದ ಕಾರ್ಯ ನಿರ್ವಹಣಾ ದೋಷದಿಂದಾಗಿ ಅನಿಲ ಸೋರಿಕೆ ಉಂಟಾಗಿ ನೌಕೆಯಲ್ಲಿ ಸ್ಫೋಟ ಸಂಭವಿಸಿತು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.