ADVERTISEMENT

ಮದುವೆಯಲ್ಲಿ 'ಬಾಂಬ್' ಉಡುಗೊರೆ ಸ್ಫೋಟಗೊಂಡು ವರ ಸಾವು; ವಧುವಿಗೆ ಗಂಭೀರ ಗಾಯ

ಏಜೆನ್ಸೀಸ್
Published 24 ಫೆಬ್ರುವರಿ 2018, 10:10 IST
Last Updated 24 ಫೆಬ್ರುವರಿ 2018, 10:10 IST
ಸಾಹು ದಂಪತಿ  (ಕೃಪೆ: ಎಎನ್‍ಐ)
ಸಾಹು ದಂಪತಿ (ಕೃಪೆ: ಎಎನ್‍ಐ)   

ಒಡಿಶಾ: ಮದುವೆಯಲ್ಲಿ ಬಾಂಬ್ ಉಡುಗೊರೆ ಸ್ಫೋಟಗೊಂಡು ವರ ಮತ್ತು ಆತನ ಅಜ್ಜಿ ಸಾವಿಗೀಡಾದ ಘಟನೆ ಒಡಿಶಾದ ಪಟ್ನಾಗಢ್ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಈ ಘಟನೆಯಲ್ಲಿ ನವವಧು ಗಂಭೀರ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬಾಂಬ್ ಸ್ಫೋಟದಲ್ಲಿ ವರ, ಪಟ್ನಾಗಢ್ ನಿವಾಸಿ ಸೌಮ್ಯ ಸೇಖರ್ ಸಾಹು ಮತ್ತು ಆತ ಅಜ್ಜಿ ಜೆಮಾಮಾನಿ ಸಾಹು (85) ಸಾವಿಗೀಡಾಗಿದ್ದಾರೆ. ವಧು ರೀಮಾ ಸಾಹು ಗಂಭೀರ ಗಾಯಗೊಂಡಿದ್ದು ಸಂಬಲ್‍ಪುರ್ ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫೆಬ್ರುವರಿ 18ರಂದು ಸಾಹು ಅವರ ವಿವಾಹ ನಡೆದಿತ್ತು. 

ADVERTISEMENT

ಉಡುಗೊರೆಯಲ್ಲಿ  ಉಡುಗೊರೆ ಕೊಟ್ಟವರ ಹೆಸರು,ವಿಳಾಸ ಯಾವುದೂ ಇರಲಿಲ್ಲ. ಉಡುಗೊರೆಯ ಕವರ್ ಬಿಚ್ಚಿದ ಕೂಡಲೇ ಅದು ಸ್ಫೋಟಗೊಂಡಿತು ಎಂದು ಸಾಹು ಅವರ ಸಂಬಂಧಿ ದೀಪಕ್ ಸಾಹು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.