ADVERTISEMENT

ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರ

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST

ನವದೆಹಲಿ (ಪಿಟಿಐ): ಏರ್ ಇಂಡಿಯಾ ಪೈಲಟ್‌ಗಳು ನಡೆಸುತ್ತಿರುವ ಮುಷ್ಕರದ ವಿಷಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.ಇಂಡಿಯನ್ ಪೈಲಟ್ಸ್ ಗಿಲ್ಡ್ (ಐಪಿಜಿ) ವಿರುದ್ಧ ನ್ಯಾಯಾಂಗ ನಿಂದನೆ ಅಪರಾಧ ಪ್ರಕ್ರಿಯೆ ಜರುಗಿಸುವಂತೆ ಕೋರಿ ಏರ್ ಇಂಡಿಯಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಡಿಜಿಸಿಎ ಎಚ್ಚರಿಕೆ
ಏರ್ ಇಂಡಿಯಾ ಪೈಲಟ್‌ಗಳ ಮುಷ್ಕರವನ್ನು ದುರುಪಯೋಗ ಪಡಿಸಿಕೊಂಡು ಏಕಾಏಕಿ ಶೇ 20ರಷ್ಟು ದರ ಹೆಚ್ಚಿಸಿರುವ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಜಾರಿ ನಿರ್ದೇಶನಾಲಯ(ಡಿಜಿಸಿಎ) ಎಚ್ಚರಿಕೆ ನೀಡಿದೆ.
ಕಳೆದ ಎರಡು ತಿಂಗಳಿನಲ್ಲಿ ನಿರ್ವಹಣಾ ವೆಚ್ಚದಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗಿಲ್ಲ; ಹಾಗಾಗಿ ದಿಢೀರನೆ ದರ ಹೆಚ್ಚಿಸುವಂತಿ್ಲ೨ ಎಂದು ಅದು ಸೂಚಿಸಿದೆ.



`ಪೈಲಟ್‌ಗಳು ನ್ಯಾಯಾಂಗ ನಿಂದನೆಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ, ಹಾಗಾಗಿ ಈ ವಿಷಯದಲ್ಲಿ  ಕೋರ್ಟ್ ಮಧ್ಯಪ್ರವೇಶಿಸಲಾಗದು~ ಎಂದು ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರನ್ನು ಒಳಗೊಂಡ ಪೀಠವು ಶುಕ್ರವಾರ ಹೇಳಿದೆ.

ಒಂದು ವೇಳೆ ಪೈಲಟ್‌ಗಳು ನಡೆಸುತ್ತಿರುವ ಮುಷ್ಕರ ಕಾನೂನು ಬಾಹಿರವಾಗಿದ್ದರೆ, ಏರ್ ಇಂಡಿಯಾ ಅವರ ವಿರುದ್ಧ ಕ್ರಮ ಜರುಗಿಸಬಹುದು ಎಂದೂ ಪೀಠ ಸೂಚಿಸಿದೆ.

ಮಾತುಕತೆಗೆ ಆಹ್ವಾನ: ಈ ನಡುವೆ, ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದರೆ ಮಾತುಕತೆಗೆ ಮುಂದಾಗುವುದಾಗಿ ಸರ್ಕಾರವು ಪೈಲಟ್‌ಗಳಿಗೆ ತಿಳಿಸಿದೆ.

ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರು, ನಷ್ಟದಲ್ಲಿರುವ ಏರ್ ಇಂಡಿಯಾದಲ್ಲಿ ಮತ್ತೆ ಬಿಕ್ಕಟ್ಟು ಉದ್ಭವವಾಗಿರುವ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ.ಪೈಲಟ್‌ಗಳ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ 12 ಅಂತರ ರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಹಾಗಾಗಿ ಪ್ರಯಾಣಿಕರು ತೀವ್ರ ತೊಂದರೆ ಎದುರಿಸುವಂತಾಗಿದೆ.

ADVERTISEMENT

ಕಿಂಗ್‌ಫಿಷರ್ ಮುಷ್ಕರ ಅಂತ್ಯ

ನವದೆಹಲಿ/ಮುಂಬೈ: ಇದೇ 15ರಿಂದ ಬಾಕಿ ವೇತನ ಪಾವತಿಸುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಿಂಗ್‌ಫಿಷರ್           ಏರ್‌ಲೈನ್ಸ್ ಪೈಲಟ್‌ಗಳು ಶುಕ್ರವಾರ ಮುಷ್ಕರ ಕೈಬಿಟ್ಟಿದ್ದಾರೆ.
ದೆಹಲಿಯಲ್ಲಿ ಏರ್‌ಲೈಲ್ಸ್ ಆಡಳಿತ ಮಂಡಳಿ ಜತೆಗಿನ ಸಭೆಯ ಬಳಿಕ ಪೈಲಟ್‌ಗಳು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳುವ ನಿರ್ಧಾರಕ್ಕೆ ಬಂದರು.
ಜನವರಿ ತಿಂಗಳ ವೇತನವನ್ನು ಇದೇ 15ರಿಂದ ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ಮತ್ತೊಮ್ಮೆ ಆಶ್ವಾಸನೆ ನೀಡಿದೆ. ಅಲ್ಲದೇ ಫೆಬ್ರುವರಿ ತಿಂಗಳ ವೇತನ ಬಾಕಿಯನ್ನೂ ಶೀಘ್ರವೇ ಪಾವತಿಸುವುದಾಗಿ ತಿಳಿಸಿದೆ.



ಮುಷ್ಕರ ಕೈಬಿಡುವಂತೆ ಪೈಲಟ್‌ಗಳಿಗೆ ಮನವಿ ಮಾಡಿಕೊಂಡಿರುವ ಅಜಿತ್ ಸಿಂಗ್, ಮುಷ್ಕರ ನಿರತರ ವಿರುದ್ಧ `ಎಸ್ಮಾ~ (ಅಗತ್ಯ ಸೇವಾ ನಿರ್ವಹಣಾ ಕಾಯ್ದೆ) ಜಾರಿ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.