
ಪ್ರಜಾವಾಣಿ ವಾರ್ತೆಮುಂಬೈ (ಪಿಟಿಐ): ಭಾರೀ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದಿದ್ದು ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ.
288 ಸ್ಥಾನಗಳ ಪೈಕಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭ್ಯವಾಗಿಲ್ಲ. ಬಿಜೆಪಿ 119 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಬಿಜೆಪಿಯೊಂದಿಗಿನಾ ಮೈತ್ರಿ ಮುರಿದುಕೊಂಡಿರುವ ಶಿವಸೇನೆ 59, ಕಾಂಗ್ರೆಸ್ 44, ಎನ್‌ಸಿಪಿ 43, ಇತರರು 23 ಸ್ಥಾನಗಳಲ್ಲಿ ಗೆಲುವು ಕಂಡಿದ್ದಾರೆ. ಆಡಳಿತಾರೂಢ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಕಳಪೆ ಸಾಧನೆ ಮಾಡಿವೆ.
ಪಕ್ಷಗಳ ಬಲಾಬಲ
| ಪಕ್ಷ | ಪಡೆದ ಸ್ಥಾನಗಳು |
| ಬಿಜೆಪಿ | 119 |
| ಶಿವಸೇನೆ | 59 |
| ಕಾಂಗ್ರೆಸ್ | 44 |
| ಎನ್‌ಸಿಪಿ | 43 |
| ಎಂಎನ್‌ಎಸ್ | 02 |
| ಇತರರು | 23 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.