ADVERTISEMENT

ಮಹಾರಾಷ್ಟ್ರ: ವಾರಕ್ಕೊಮ್ಮೆ ಖಾದಿ ಸಮವಸ್ತ್ರ ಧರಿಸಲು ಪೊಲೀಸರಿಗೆ ಸೂಚನೆ

ಏಜೆನ್ಸೀಸ್
Published 13 ಜೂನ್ 2017, 9:42 IST
Last Updated 13 ಜೂನ್ 2017, 9:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ವಾರಕ್ಕೆ ಒಂದು ಬಾರಿ ಖಾದಿ ಸಮವಸ್ತ್ರ ಧರಿಸುವಂತೆ ಮಹಾರಾಷ್ಟ್ರದ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಮಹಾರಾಷ್ಟ್ರದ ಐಜಿಪಿ ಅನೂಪ್ ಕುಮಾರ್ ಸಿಂಗ್ ಜೂನ್ 1ರಂದೇ ಸುತ್ತೋಲೆ ಹೊರಡಿಸಿದ್ದಾರೆ ಎಂದು ಮುಂಬೈ ಮಿರರ್‌ ವೆಬ್‌ಸೈಟ್ ವರದಿ ಮಾಡಿದೆ.

‘ಖಾದಿ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಖಾದಿಗೆ ಉತ್ತೇಜನ ನೀಡುವುದರಿಂದ ಅನೇಕ ಜನರಿಗೆ ಸ್ವ ಉದ್ಯೋಗ ನೀಡಿದಂತಾಗುತ್ತದೆ. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದು ಜೊತೆ ಖಾದಿ ಸಮವಸ್ತ್ರ ಇಟ್ಟುಕೊಳ್ಳಿ. ವಾರಕ್ಕೆ ಒಂದು ಬಾರಿಯಾದರೂ ಅದನ್ನು ಧರಿಸಿ’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಇದಕ್ಕೆ ಪೊಲೀಸ್ ಅಧಿಕಾರಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರ್ಕಾರಿ ಉದ್ಯೋಗಿಗಳು ವಾರಕ್ಕೊಮ್ಮೆ ಖಾದಿ ವಸ್ತ್ರ ಧರಿಸುವಂತೆ ಕಳೆದ ವರ್ಷ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಸಿಬ್ಬಂದಿಗೂ ಇದೇ ಸೂಚನೆ ನೀಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.