ನವದೆಹಲಿ(ಪಿಟಿಐ): ಮಹಿಳೆಯರಿಗೆ ಸುರಕ್ಷಿತ ಬಸ್ ಪ್ರಯಾಣ ಒದಗಿಸುವ ಉದ್ದೇಶದಿಂದ ಜಾಗತಿಕ ಮಾನವ ಹಕ್ಕುಗಳ ಸಂಘಟನೆ ‘ಬ್ರೇಕ್‌ಥ್ರೂ’ ಶನಿವಾರ ಇಲ್ಲಿ ಅಭಿಯಾನವನ್ನು ಆರಂಭಿಸಿದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆರಂಭಿಸ-ಲಾದ ಈ ಅಭಿಯಾನವು ಪ್ರಮುಖವಾಗಿ ಸಾರ್ವಜನಿಕ ಸಾರಿಗೆಗಳ ಬಳಕೆಯಲ್ಲಿ ಮಹಿಳೆಯರ ವಿಶ್ವಾಸವನ್ನು ಮರುಸ್ಥಾಪಿಸುವ ಕುರಿತಂತೆ ಸರ್ಕಾರ, ಸಾರಿಗೆ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ನಡುವೆ ಸಮನ್ವಯ ಸಾಧಿಸುವ ಉದ್ದೇಶ ಹೊಂದಿದೆ.
‘ಅಭಿಯಾನದ ಅಂಗವಾಗಿ, ಎಲ್ಲ ವರ್ಗದ ಮಹಿಳೆಯರನ್ನೂ ಒಗ್ಗೂಡಿಸಿ, ಅವರನ್ನು ಬಸ್‌ನಲ್ಲಿ ಕರೆದುಕೊಂಡು ಹೋಗಿ ಚಿತ್ರಗಳು, ಪಠ್ಯ, ಮತ್ತು ದೃಶ್ಯಗಳ ಮೂಲಕ ನಗರವನ್ನು ತೋರಿಸಲಾಗುವುದು. ತನ್ಮೂಲಕ ಸಾರ್ವಜನಿಕ ಸಾರಿಗೆಗಳಲ್ಲಿ ಬಳಕೆ ಮಾಡುವುದು ನಮ್ಮ ಹಕ್ಕು ಎಂದು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ಬ್ರೇಕ್‌ಥ್ರೂನ ಭಾರತ ಘಟಕದ ಉಪಾಧ್ಯಕ್ಷೆ ಸೋನಾಲಿ ಖಾನ್ ಹೇಳಿದ್ದಾರೆ.
‘ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅವರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ಕುರಿತು ಸಲಹೆಗಳನ್ನು ನೀಡಲು ವೇದಿಕೆ ನಿರ್ಮಾಣ ಮಾಡುವುದು ಅಭಿಯಾನದ ಉದ್ದೇಶ’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.