ADVERTISEMENT

ಮಾಜಿ ಸಚಿವ ರಾಜಾ ನ್ಯಾಯಾಂಗ ಬಂಧನಕ್ಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 10:55 IST
Last Updated 17 ಫೆಬ್ರುವರಿ 2011, 10:55 IST

ನವದೆಹಲಿ (ಪಿಟಿಐ): ಮಾಜಿ ದೂರಸಂಪರ್ಕ ಸಚಿವ ರಾಜಾ ಅವರನ್ನು ದೆಹಲಿ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಗುರುವಾರ ಒಪ್ಪಿಸಿದ್ದು, ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

ತನಿಖಾ ಸಂಸ್ಥೆ ಸಿಬಿಐ ರಾಜಾ ಅವರನ್ನು ವಿಚಾರಣೆಗೊಳಪಡಿಸುವ ಯಾವುದೇ ಮನವಿ ಮಾಡದ ಕಾರಣ  ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ.ಸಯಾನಿ ಅವರು ಮಾರ್ಚ್ 3 ರ ವರೆಗೆ ರಾಜಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ರಾಜಾ ಅವರಿಗೆ ಮನೆ ಊಟ ಹಾಗೂ ಔಷಧಿಗಳನ್ನು ನೀಡಬೇಕೆಂದು ಅವರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಈ ಸಂಬಂಧ ತಿಹಾರ್ ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ADVERTISEMENT

ಫೆಬ್ರುವರಿ 2 ರಂದು 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ರಾಜಾ ಅವರನ್ನು ಬಂಧಿಸಿ  ವಿಚಾರಣೆಗೊಳಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.