ನವದೆಹಲಿ (ಐಎಎನ್‌ಎಸ್): ಭಾರತೀಯ ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳ ಮೇಲೆ ಬಾಹ್ಯ ಸಂಸ್ಥೆಗಳು ನಿಯಂತ್ರಣ ಹೇರುವುದಕ್ಕಿಂತ ಅವುಗಳೇ ಸ್ವಯಂ ಆಗಿ ನಿಯಂತ್ರಣ ಹೇರಿಕೊಳ್ಳುವುದು ಉತ್ತಮ ಮಾರ್ಗ ಎಂದು ಮಾಧ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
`ಭಾರತೀಯ ಪತ್ರಿಕಾ ಮಂಡಳಿಯಂತಹ ಸಂಸ್ಥೆಗಳು ಮಾಧ್ಯಮಗಳಿಗಾಗಿ ನೀತಿ ಸಂಹಿತೆ ರೂಪಿಸುವುದು ಮಾಧ್ಯಮಗಳ ನಿಯಂತ್ರಣಕ್ಕೆ ಇರುವ ಏಕೈಕ ದಾರಿ ಎಂದು ತೋರುತ್ತದೆ~ ಎಂದು ಅಂತರರಾಷ್ಟ್ರೀಯ ಮಾಧ್ಯಮ ವೀಕ್ಷಕ ಮತ್ತು `ಇಂಡಿಯಾಸ್ ನ್ಯೂಸ್‌ಪೇಪರ್ ರೆವಲ್ಯೂಷನ್~ ಲೇಖಕ ರಾಬಿನ್ ಜೆಫ್ರಿ ಹೇಳಿದ್ದಾರೆ.
`ವಿದೇಶದ ಇಂಗ್ಲಿಷ್ ಮಾಧ್ಯಮಗಳು ಈ ನಿಟ್ಟಿನಲ್ಲಿ ಇದುವರೆಗೆ ತೃಪ್ತಿಕರವಾದ ಮಾರ್ಗ ಕಂಡುಕೊಂಡಿಲ್ಲ. ಆದರೆ, ಸ್ವಯಂ ನಿಯಂತ್ರಣ ಮಾತ್ರ ಇದಕ್ಕೆ ಅತ್ಯುತ್ತಮ ದಾರಿ~ ಎಂದು ನವದೆಹಲಿ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಭಾರತೀಯ ಸಂಪಾದಕರ ಮಂಡಳಿ ಆಯೋಜಿಸಿದ್ದ ರಾಜೇಂದ್ರ ಮಥುರ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಜೆಫ್ರಿ ಅಭಿಪ್ರಾಯಪಟ್ಟಿದ್ದಾರೆ. ಮೂಲತಃ ಕೆನಡಾ ಪತ್ರಕರ್ತರಾದ ಜೆಫ್ರಿ ಭಾರತ, ಆಸ್ಟ್ರೇಲಿಯಾ, ಸಿಂಗಪುರದಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.