ADVERTISEMENT

ಮಾಲ್ಡೀವ್ಸ್‌ಗೆ ಭಾರತ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ನವದೆಹಲಿ (ಪಿಟಿಐ): `ಮಾಲೆ ಅಂತರ ರಾಷ್ಟೀಯ ವಿಮಾನ ನಿಲ್ದಾಣ ನವೀಕರಣ ಗುತ್ತಿಗೆ ಸಂಬಂಧದ ಎಲ್ಲ ಒಪ್ಪಂದ ಮತ್ತು ಷರತ್ತುಗಳಿಗೆ ನೀವು ಬದ್ಧರಾಗಿರಬೇಕು. ಇದನ್ನು ನಾವು ನಿರೀಕ್ಷಿಸುತ್ತೇವೆ' ಎಂದು ಭಾರತವು ಮಾಲ್ಡೀವ್ಸ್ ಸರ್ಕಾರಕ್ಕೆ ಗುರುವಾರ ಸ್ಪಷ್ಟವಾಗಿ ಹೇಳಿದೆ.

ಮಾಲ್ಡೀವ್ಸ್‌ನ ಭಾರತೀಯ ಹೈಕಮೀಷನರ್ ನ್ಯಾಯಾಲಯದ ತೀರ್ಪನ್ನು ಅಧ್ಯಯನ ಮಾಡುವರು ಎಂದು ವಿದೇಶಾಂಗ ವ್ಯವಹಾರಗಳ ಅಧಿಕೃತ ವಕ್ತಾರರಾದ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

ಹೊಸ ಹೈಕಮಿಷನರ್: ಪಶ್ಚಿಮ ಏಷ್ಯಾ ಉತ್ತರ ಆಫ್ರಿಕಾದ ವಲಯದ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿಯಾಗಿರುವ ರಾಜೀವ್ ಶಹಾರಿ ಅವರನ್ನು ಮಾಲ್ಡೀವ್ಸ್‌ನ  ಹೊಸ ಹೈಕಮಿಷನರ್ ಆಗಿ ನೇಮಕ ಮಾಡಲಾಗಿದೆ.  ಈ ಹಿಂದೆ ಮಾಲ್ಡೀವ್ಸ್ ಹೈಕಮಿಷನರ್ ಆಗಿದ್ದ ಡಿ.ಎಂ. ಮುಲೆ  ಅವರನ್ನು ನ್ಯೂಯಾರ್ಕ್‌ನ ಭಾರತೀಯ ಕೌನ್ಸಿಲ್ ಜನರಲ್ ಸ್ಥಾನಕ್ಕೆ ವರ್ಗಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.