ADVERTISEMENT

ಮೀನುಗಾರರ ಹತ್ಯೆ: ನ್ಯಾಯಾಲಯಕ್ಕೆದುಭಾಷಿಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 19:30 IST
Last Updated 18 ಜೂನ್ 2012, 19:30 IST

ಕೊಲ್ಲಂ (ಪಿಟಿಐ): ಇಬ್ಬರು ಮೀನುಗಾರರನ್ನು ಗುಂಡಿಟ್ಟು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಇಟಲಿಯ `ಎನ್ರಿಕಾ ಲೆಕ್ಸಿ~ ಹಡಗಿನ ಇಬ್ಬರು ನಾವಿಕರು ನ್ಯಾಯಾಲಯದ ವಿಚಾರಣೆಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಸೋಮವಾರ ದುಭಾಷಿಗಳ ತಂಡದ ಹೆಸರುಗಳನ್ನು ನೀಡಿದ್ದಾರೆ.

ನ್ಯಾಯಾಲಯದ ವಿಚಾರಣೆಯನ್ನು ಇಂಗ್ಲಿಷ್‌ನಿಂದ ಇಟಲಿ ಭಾಷೆಗೆ ತರ್ಜುಮೆಗೊಳಿಸುವ ಸಲುವಾಗಿ ದುಭಾಷಿಗಳ ಹೆಸರನ್ನು ನಾವಿಕರು ನೀಡಿರುವ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಪಿ. ಡಿ. ರಾಜನ್ ಪ್ರಕರಣದ ವಿಚಾರಣೆಯನ್ನು ಜುಲೈ10ಕ್ಕೆ ಮುಂದೂಡಿದರು.
 
ನಾವಿಕರಾದ ಲಾಟೋರ್ ಮ್ಯಾಸಿಮಿಲಾನೊ ಮತ್ತು ಸ್ಯಾಲ್ವಟೋರ್ ಜಿರೋನ್ ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು. ಇವರನ್ನು ಫೆ. 19ರಂದು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.