ADVERTISEMENT

ಮುಂಗಾರು ಕೊರತೆಯ ಚಿಂತೆ ಬೇಡ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ಮುಂಗಾರು ಕೊರತೆಯ ಚಿಂತೆ ಬೇಡ
ಮುಂಗಾರು ಕೊರತೆಯ ಚಿಂತೆ ಬೇಡ   

ನವದೆಹಲಿ: ಈ ಬಾರಿಯ ಮುಂಗಾರು ಸಾಮಾನ್ಯವಾಗಿರಲಿದೆ. ದೀರ್ಘಾವಧಿ ಸರಾಸರಿಯ ಶೇ 97ರಷ್ಟು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಸೋಮವಾರ ಘೋಷಿಸಿದೆ.

ಈ ಅಂದಾಜಿಗಿಂತ ಶೇ 5ರಷ್ಟು ಹೆಚ್ಚು ಅಥವಾ ಕಡಿಮೆ ಮಳೆ ಆಗಬಹುದು ಎಂದು ಇಲಾಖೆ ಮಹಾನಿರ್ದೇಶಕ ಕೆ.ಜೆ. ರಮೇಶ್‌ ಹೇಳಿದ್ದಾರೆ.

ಭಾರತದಲ್ಲಿ ವರ್ಷದಲ್ಲಿ ಸುರಿಯುವ ಒಟ್ಟು ಮಳೆಯ ಶೇ 70ರಷ್ಟು ಮುಂಗಾರು ಅವಧಿಯಲ್ಲಿಯೇ ಆಗುತ್ತದೆ. ಅಕ್ಕಿ, ಗೋಧಿ, ಕಬ್ಬು ಮತ್ತು ಧಾನ್ಯಗಳ ಉತ್ಪಾದಕತೆಯು ಮುಂಗಾರು ಮಳೆಯನ್ನೇ ಅವಲಂಬಿಸಿದೆ.

ADVERTISEMENT

ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಕೃಷಿ ಉತ್ಪಾದಕತೆ ಹೆಚ್ಚಾಗುತ್ತದೆ. ಪರಿಣಾಮವಾಗಿ ಆರ್ಥಿಕತೆ ಚೇತರಿಸಿಕೊಳ್ಳುತ್ತದೆ.

ಮುಂಗಾರು ಸಾಮಾನ್ಯವಾಗಿರಲಿದೆ, ಯಾವುದೇ ಚಿಂತೆ ಇಲ್ಲ ಎಂದು ಹೇಳುವುದಕ್ಕೆ ಸಾಧ್ಯ ಇಲ್ಲ. ಪ್ರಸ್ತುತ, ಎಲ್‌ನಿನೊ ಪರಿಣಾಮದ ಸಾಧ್ಯತೆ ಕಡಿಮೆ ಇದೆ. ಪೆಸಿಫಿಕ್‌ ಸಾಗರದ ಮೇಲ್ಮೈಯಲ್ಲಿ ಅಸಹಜ ಬಿಸಿಯಾಗುವಿಕೆಯನ್ನು ಎಲ್‌ನಿನೊ ಎಂದು ಕರೆಯುತ್ತಾರೆ. ಇದು ಜಾಗತಿಕ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಂಗಾರು ಕೊನೆಯಲ್ಲಿ  ಎಲ್‌ನಿನ ಪರಿಣಾಮ ದುರ್ಬಲವಾಗಬಹುದು ಎಂದು ಈಗ ಅಂದಾಜಿಸಲಾಗಿದೆ.

2017ರಲ್ಲಿ ಕೊರತೆ

2017ರ ಮುಂಗಾರುವಿನಲ್ಲಿ ವಾಡಿಕೆಯಷ್ಟು ಮಳೆ ಬಂದಿರಲಿಲ್ಲ. ವಾಡಿಕೆಯ ಶೇ 96ರಷ್ಟು ಮಳೆ ಸುರಿಯಬಹುದು ಎಂದು ಇಲಾಖೆಯು ಏಪ್ರಿಲ್‌ನಲ್ಲಿ ಅಂದಾಜಿಸಿತ್ತು. ಬಳಿಕ ಅದನ್ನು ಜೂನ್‌ನಲ್ಲಿ ಶೇ 98ಕ್ಕೆ ಪರಿಷ್ಕರಿಸಲಾಗಿತ್ತು. ಆದರೆ ಶೇ 95ರ ಮಳೆ ಮಾತ್ರ ಸುರಿಯಿತು. ಇದನ್ನು ವಾಡಿಕೆಗಿಂತ ಕೊರತೆ ಮುಂಗಾರು ಎಂದೇ ಪರಿಗಣಿಸಲಾಗುತ್ತದೆ. ಅಕ್ಟೋಬರ್‌ ಬಳಿಕ ಶೇ 5ರಷ್ಟು ಮಳೆ ಸುರಿದಿದ್ದರಿಂದಾಗಿ ಬೇಸಿಗೆ ಬೆಳೆಗೆ ಅನುಕೂಲ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.