ADVERTISEMENT

ಮುಂಗಾರು ಪೂರ್ವ ಮಳೆ: ಪ್ರವಾಹ ಪರಿಸ್ಥಿತಿಯಲ್ಲಿ ಮುಂಬೈ

ಏಜೆನ್ಸೀಸ್
Published 7 ಜೂನ್ 2018, 11:11 IST
Last Updated 7 ಜೂನ್ 2018, 11:11 IST
ಪಿಟಿಐ ಸಂಗ್ರಹ ಚಿತ್ರ
ಪಿಟಿಐ ಸಂಗ್ರಹ ಚಿತ್ರ   

ಮುಂಬೈ: ಗುರುವಾರ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಿಗ್ಗೆ 11.30ರಿಂದ ಮಧ್ಯಾಹ್ನ 12.30 ರ ವರೆಗೆ ಸುರಿದ ಭಾರಿ ಮಳೆಯಿಂದಾಗಿ ಕೇಂದ್ರ ಮುಂಬೈ, ಎಲ್ಫಿನ್ಸ್ಟೋನ್‌ ರಸ್ತೆ, ದಡಾರ್‌ ಟಿಟಿ ಸರ್ಕಲ್‌ ಹಾಗೂ ಹಿಂದೂಮತ ಬ್ರಿಡ್ಜ್‌ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದೆ.

ಮಧ್ಯಾಹ್ನದ ನಂತರ ಮಳೆ ನಿಂತಿದೆಯಾದರೂ ಸಂಚಾರ ವ್ಯತ್ಯಯ ಮುಂದುವರಿದಿದೆ.

ADVERTISEMENT

‘ನಗರದಲ್ಲಿ 20 ಮಿಲಿಮೀಟರ್‌ ಮಳೆಯಾಗಿದೆ’ ಎಂದು ಹವಮಾನ ಇಲಾಖೆ ತಿಳಿಸಿದೆ. ಆದಾಗ್ಯೂ ರೈಲು ಸಂಚಾರಕ್ಕೆ ಯಾವುದೇ ಅಡಚಣೆ ಇಲ್ಲ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.