ADVERTISEMENT

ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ

ಮಿಜೋರಾಂ ಬ್ರು ವಲಸಿಗರಿಗೆ ಅಂಚೆ ಮತದಾನ ಬೇಡ–ಸಿ.ಎಂ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಐಜ್್ವಾಲ್‌ (ಪಿಟಿಐ): ಮಿಜೋರಾಂನ ಬ್ರು ವಲಸಿಗರಿಗೆ ರಾಜ್ಯದ ಏಕೈಕ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್‌ 9ರಂದು ನಡೆಯುವ ಮತದಾನದಲ್ಲಿ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌. ಸಂಪತ್‌ ಅವರನ್ನು ಮಿಜೋರಾಂ ಮುಖ್ಯಮಂತ್ರಿ ಲಾಲ್‌ ಥನ್‌ಹವ್ಲಾ ಅವರು ಕೋರಿದ್ದಾರೆ.

ಬ್ರು ಸಮುದಾಯದ ಜನರು ಮತ ಚಲಾಯಿಸಲು ಬಯಸಿದರೆ ರಾಜ್ಯ­ದೊಳಕ್ಕೆ ಬಂದು ಮತ ಚಲಾಯಿಸ­ಬೇಕೇ ಹೊರತು ಅಂಚೆ ಮೂಲಕ ಅಲ್ಲ ಎಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಮಿಜೋರಾಂ ಮುಖ್ಯಮಂತ್ರಿ ಪ್ರತಿಪಾದಿಸಿ­ದ್ದಾರೆ. ಈ ಮೊದಲು ವಲಸಿಗರ ಶಿಬಿರ­ದ­ಲ್ಲಿಯೇ ಮತ ಚಲಾಯಿಸಲು ಅವ­ಕಾಶ ಕೊಡಬೇಕು ಎಂದು ಕೋರಲಾಗಿತ್ತು.

ಆಯೋಗ ಇದಕ್ಕೆ ಒಪ್ಪಿಗೆ ನೀಡಿತ್ತು ಎಂದು ಹೇಳಲಾಗಿದೆ.  1997 ಮತ್ತು 2009ರಲ್ಲಿ ಮಿಜೋರಾಂ­­ನಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ತ್ರಿಪುರಾಕ್ಕೆ ವಲಸೆ ಬಂದ ಬ್ರು ಸಮುದಾಯದ ಕೆಲವು ಕುಟುಂಬಗಳಷ್ಟೇ ಹಿಂದಿರು­ಗಿವೆ. ಉಳಿದವರು ಶಿಬಿರಗಳಲ್ಲಿಯೇ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.